ಬೈರುತ್ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ಘೋಷಿಸಿದೆ. ಘಟನೆಯ ಬಗ್ಗೆ ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾವನ್ನು ಮುನ್ನಡೆಸಿರುವ ನಸ್ರಲ್ಲಾಹ್, ಬೈರುತ್ನ ದಕ್ಷಿಣದ ದಹೀಹ್ನಲ್ಲಿ ಆರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆಯ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದಲ್ಲಿ ಲೆಬನಾನಿನ ರಾಜಧಾನಿಯಲ್ಲಿ ಸಂಭವಿಸಿದ ಅತಿ ದೊಡ್ಡ ಸ್ಫೋಟ ಇದಾಗಿದೆ.
ಇಸ್ರೇಲ್ ಸೇನೆಯು ಇದು ಹಿಜ್ಬುಲ್ಲಾ ಪ್ರಧಾನ ಕಛೇರಿಯ ಮೇಲೆ ನಿಖರವಾದ ವೈಮಾನಿಕ ದಾಳಿ ಎಂದು ಹೇಳಿಕೊಂಡಿದೆ. ಆರಂಭಿಕ ಸ್ಫೋಟದ ನಂತರ ಇಸ್ರೇಲ್ ದಕ್ಷಿಣದ ಉಪನಗರಗಳ ಇತರ ಪ್ರದೇಶಗಳ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸಿತು.
ಹಿಜ್ಬುಲ್ಲಾದ ಸದರ್ನ್ ಫ್ರಂಟ್ನ ಕಮಾಂಡರ್ ಅಲಿ ಕರ್ಕಿ ಮತ್ತು ಹೆಚ್ಚುವರಿ ಹಿಜ್ಬುಲ್ಲಾ ಕಮಾಂಡರ್ಗಳು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಇಸ್ರಾಟೆಲಿ ಮಿಲಿಟರಿ ತಿಳಿಸಿದೆ.