ಪ್ರತಿಯೊಬ್ಬರ ಹಣಕಾಸು ಯೋಜನೆ ಪಯಣದಲ್ಲಿ, ಅವಧಿ ವಿಮೆ ಬಹುಶಃ ಅವರ ಹೂಡಿಕೆ ಬಂಡವಾಳದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಕಾರಣಗಳು ಹಲವು-ಪ್ರಾಥಮಿಕವಾಗಿ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ನಿಯಮಿತ ವೆಚ್ಚಗಳನ್ನು ಪಾವತಿಸಲು ಮತ್ತು ದೀರ್ಘಾವಧಿಯ ಸಾಲಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಮೃತರ ಕುಟುಂಬಕ್ಕೆ ಆದಾಯದ ಮೂಲವನ್ನು ಒದಗಿಸುತ್ತದೆ.
ಪಾಲಿಸಿಬಜಾರ್.ಕಾಮ್ ಅವಧಿ ವಿಮೆ ವಿಭಾಗದ ಮುಖ್ಯಸ್ಥ ರಿಷಭ್ ಗಾರ್ಗ್ ಹೇಳುವಂತೆ, “ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ತಿಳಿದುಕೊಳ್ಳುವುದು ಮಾನಸಿಕ ಶಾಂತಿಯನ್ನು ಒದಗಿಸುತ್ತದೆ. ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ ಅತ್ಯಗತ್ಯವಾಗಿದ್ದರೂ, ನೀವು ನಿಮ್ಮ ತಾಯ್ನಾಡಿನಿಂದ ದೂರವಿದ್ದರೆ ಅದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಭಾರತದಲ್ಲಿ ವಾಸಿಸುವ ಗ್ರಾಹಕರಿಗೆ ಇದು ಅತ್ಯಗತ್ಯವಾಗಿರುವಂತೆಯೇ, ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಟರ್ಮ್ ಇನ್ಶೂರೆನ್ಸ್ ಅಷ್ಟೇ ಮುಖ್ಯ, ಏಕೆಂದರೆ ಅನಾರೋಗ್ಯ, ಗಾಯ ಅಥವಾ ಸಾವಿನಂತಹ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ, ಇದು ಹಣಕಾಸು ಸುರಕ್ಷೆಯನ್ನು ನೀಡುತ್ತದೆ ಮತ್ತು ಅವರ ಕುಟುಂಬದ ಭವಿಷ್ಯವು ರಾಜಿಯಾಗದಂತೆ ನೋಡಿಕೊಳ್ಳುತ್ತದೆ.
ಆದಾಗ್ಯೂ, ವಿದೇಶಿ ನೆಲದಲ್ಲಿ ಇದ್ದಾರೆ ಎಂಬ ಮಾತ್ರಕ್ಕೆ ಆ ದೇಶದಿಂದ ಪಾಲಿಸಿಯನ್ನು ಖರೀದಿಸಬೇಕು ಎಂದು ಅರ್ಥವಲ್ಲ. ಎನ್ಆರ್ಐಗಳು ಭಾರತದಿಂದ ಟರ್ಮ್ ಇನ್ಶೂರೆನ್ಸ್ ಖರೀದಿಸುವುದು ಆರ್ಥಿಕವಾಗಿ ಬುದ್ಧಿವಂತವಾಗಿದೆ. ಭಾರತದಲ್ಲಿ ಲಭ್ಯವಿರುವ ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚು ಮಿತವ್ಯಯಕಾರಿ ಮತ್ತು ಇತರ ರಾಷ್ಟ್ರಗಳಲ್ಲಿ ನೀಡುವುದಕ್ಕಿಂತ ಹೆಚ್ಚು ವ್ಯಾಪಕವಾದ ಸುರಕ್ಷಾ ವ್ಯಾಪ್ತಿಯನ್ನು ಇದು ಒದಗಿಸುತ್ತವೆ. ತುಲನಾತ್ಮಕವಾಗಿ ಕಡಿಮೆ ಪ್ರೀಮಿಯಂ ಪಾವತಿಸುವ ಮೂಲಕ, ಎನ್ಆರ್ಐಗಳು ಹೆಚ್ಚಿನ ಮೊತ್ತದ ಜೀವನ ಸುರಕ್ಷೆನೀಡುವ ಟರ್ಮ್ ಪ್ಲಾನ್ ಅನ್ನು ಖರೀದಿಸಬಹುದು”.
ನಿರ್ದಿಷ್ಟವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರ ವಿಷಯಕ್ಕೆ ಬಂದಾಗ, ಕೆಲವು ನಿದರ್ಶನಗಳಲ್ಲಿ ಬೆಲೆ ವ್ಯತ್ಯಾಸವು 50 ರಿಂದ 60 ಪ್ರತಿಶತದಷ್ಟು ಹೆಚ್ಚಿರಬಹುದು. ಉದಾಹರಣೆಗೆ, ಸಿಂಗಾಪುರ ಅಥವಾ ಯುಎಇಯಿಂದ ಖರೀದಿಸಿದ ಟರ್ಮ್ ಇನ್ಶೂರೆನ್ಸ್ ಪಾಲಿಸಿಯು ಭಾರತದಿಂದ ಖರೀದಿಸಿದ ಒಂದಕ್ಕಿಂತ 40 ರಿಂದ 50 ಪ್ರತಿಶತ ಹೆಚ್ಚು ವೆಚ್ಚವಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಮರು- ವಿಮಾ ದರಗಳು ಮತ್ತು ಶೇಕಡ 18 ರ ವರೆಗಿನ ಹೆಚ್ಚುವರಿ ಜಿಎಸ್ಟಿ ಲಾಭದಿಂದಾಗಿ ಇದು ಸಾಧ್ಯವಾಗುತ್ತದೆ.