ಮಧ್ಯಪ್ರದೇಶ:-ಮಧ್ಯಪ್ರದೇಶದ ಗುನಾದಲ್ಲಿ ತನ್ನ ಮಗಳಿಗೆ ಕಚ್ಚಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ರಸ್ತೆಯ ತುಂಬೆಲ್ಲಾ ಬೈಕ್ನಲ್ಲಿ ಹೋಗುತ್ತಾ ನಾಯಿಯನ್ನು ಧರ ಧರನೆ ಎಳೆದೊಯ್ದಿದ್ದಾರೆ.
ಪಪ್ಪು ಮೊದಲು ನಾಯಿಗೆ ಕೋಲಿನಿಂದ ತಳಿಸಿದ್ದಾನೆ, ಬಳಿಕ ಬೆಂಕಿಗೆ ಹಾಕಿ ಸುಟ್ಟಿದ್ದಾನೆ, ಅಷ್ಟಾದರೂ ಅದು ಸಾಯದಿದ್ದಾಗ ನಾಯಿಯನ್ನು ಬೈಕ್ನ ಹಿಂಬದಿಗೆ ಕಟ್ಟಿ ಎಳೆದೊಯ್ದು ರಸ್ತೆಯಲ್ಲಿ ಎಸೆದಿದ್ದಾನೆ. ಕೊನೆಯದಾಗಿ ಪಪ್ಪು ನಾಯಿಯ ತಲೆಯನ್ನು ದೊಡ್ಡ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.