ನಮಗೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದ್ರೆ ಕುಕ್ಕರ್ನಿಂದ ನೀರು ಲೀಕ್ ಆಗುವುದು.
ಕುಕ್ಕರ್ನಲ್ಲಿ ಅನ್ನ ಮಾಡಲು ಇಟ್ಟಾಗ ಅಥವಾ ಬೇಳೆ ಇಟ್ಟಾಗ ಒಂದೆರಡು ಸೀಟಿ ಹೊಡೆದಾಗ ನೀರು ಲೀಕ್ ಆಗುತ್ತದೆ.
ಹೀಗೆ ಲೀಕ್ ಆಗುವುದರಿಂದ ಒಲೆ ಮೇಲೆ ನೀರು ಬೀಳುವುದು, ಅಡುಗೆ ಮನೆಯೆಲ್ಲಾ ಮತ್ತೊಂದು ಗಂಟೆಯ ಕೆಲಸಕ್ಕೆ ದಾರಿಯಾಗುತ್ತದೆ. ಇದು ಎಲ್ಲಾ ಗೃಹಿಣಿಯರ ಸಮಸ್ಯೆಯಾಗಿರುತ್ತದೆ.
ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲೇ ಹೇಗೆ ಪರಿಹಾರ ಮಾಡಿಕೊಳ್ಳುವುದು? ಇದಕ್ಕೇ ಏನು ಮಾಡಬೇಕು? ಕುಕ್ಕರ್ನಿಂದ ನೀರು ಬರದಂತೆ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್ನಿಂದ ನೀರು ಹೊರಬರಲು ಪ್ರಮುಖ ಕಾರಣ ಅಂದರೆ ಕುಕ್ಕರ್ ಸವಿದಿದೆ ಎಂದರ್ಥ. ಇಲ್ಲವೆ ರಬ್ಬರ್ ಬದಲಾಯಿಸಬೇಕಾದ ಸಮಸ್ಯೆ ಎನ್ನಬಹುದು. ಆದ್ರೆ ಸಾಮಾನ್ಯವಾಗಿ ಕುಕ್ಕರ್ನ ಒಂದು ಭಾಗದಲ್ಲಿ ಸವಿದರೆ ರಬ್ಬರ್ ಸರಿಯಾಗಿ ಕೂರಿಸಲು ಆಗದೇ ಇದ್ದಾಗ ಲೀಕ್ ಆಗುತ್ತದೆ. ಹೀಗಾಗಿ ಮೊದಲು ಕುಕ್ಕರ್ ಸರಿಮಾಡಬೇಕು.
ಕುಕ್ಕರ್ನ ಒಂದು ಬದಿಯಲ್ಲಿ ನೀರು ಹನಿಹಾಕುವುದು ಇಲ್ಲವೆ ಸುರಿಯುವುದು ಆಗುತ್ತಿದ್ದರೆ ಈ ಸ್ಯಾಂಡ್ ಪೇಪರ್ ಬಳಸಿ ಸರಿ ಮಾಡಬಹುದು. ಕುಕ್ಕರ್ನ ಮುಚ್ಚಳದ ಕಂಠದ ಬಳಿ ಗೆರೆಗಳು ಮೂಡುವ ಕಾರಣ ನೀರು ಸೋರಲು ಆರಂಭಿಸುತ್ತದೆ. ಹೀಗಾಗಿ ಈ ಗೆರೆಗಳನ್ನು ಮೊದಲು ತೆಗೆಯಬೇಕು. ಹೀಗಾಗಿ ಸ್ಯಾಂಡ್ ಪೇಪರ್ ಅನ್ನು ಗೆರೆಗಳಿರುವ ಜಾಗದಲ್ಲಿ ಉಜ್ಜಬೇಕು. ಈ ಗೆರೆಗಳು ಮಾಯವಾದರೆ ಇನ್ನೆಂದು ನೀರು ಸುರಿಯುವುದಿಲ್ಲ
ಸೀಟಿ ತೆಗೆದು ಕ್ಲೀನ್ ಮಾಡಿ
ಕುಕ್ಕರ್ ಸೀಟಿ ಬಳಿಯಿಂದ ನೀರು ಸುರಿಯುತ್ತಿದ್ದರೆ ಅದನ್ನು ನಿಲ್ಲಿಸಲು ಸೀಟಿಯನ್ನು ಬಿಚ್ಚಿ ಚೆನ್ನಾಗಿ ತೊಳೆಯಬೇಕು. ಹಾಗೆ ಸೇಫ್ಟಿ ಬಳಿ ಹಿಡಿದಿರುವ ಕಪ್ಪು ಕೊಳೆಯನ್ನು ತೆಗೆಯಬೇಕು. ಒಂದು ಸಣ್ಣ ಕಡ್ಡಿಯನ್ನು ತೆಗೆದುಕೊಂಡು ಸ್ವಚ್ಚ ಮಾಡಿಕೊಳ್ಳಬೇಕು.
ಕುಕ್ಕರ್ ರಬ್ಬರ್ಗೆ ಎಣ್ಣೆ ಸವರಿ ಕುಕ್ಕರ್ನ ರಬ್ಬರ್ ಸಡಿಲವಾದಾಗಲು ನೀರು ಸೋರಿಕೆಯಾಗುತ್ತದೆ. ಹೀಗಾಗಿ ಕುಕ್ಕರ್ನ ರಬ್ಬರ್ಗೆ ಎಣ್ಣ ಸವರಿ ತಣ್ಣಗಿರುವ ನೀರಿನಲ್ಲಿ ಅದ್ದಿ ಇಡಬೇಕು. ಸುಮಾರು 1 ಗಂಟೆಯ ಬಳಿಕ ತೆಗೆದು ಮತ್ತೆ ಎಣ್ಣೆ ಸವರಿದರೆ ರಬ್ಬರ್ ಬಿಗಿಯಾಗುತ್ತದೆ. ಇಲ್ಲವೆ ಈ ರಬ್ಬರ್ ಅನ್ನು ಫ್ರಿಡ್ಜ್ನಲ್ಲಿ ಡೀಪ್ ಫ್ರೀಜ್ನಲ್ಲಿ ಇಡಬೇಕು.
ರಬ್ಬರ್ಗೆ ಮತ್ತೊಂದು ರಬ್ಬರ್ ಸುತ್ತಿ
ಇಷ್ಟಾದರು ಕುಕ್ಕರ್ನಿಂದ ನೀರು ಸೋರುವುದು ನಿಲ್ಲದಿದ್ದರೆ ನೀವು ಕುಕ್ಕರ್ನ ರಬ್ಬರ್ ತೆಗೆದುಕೊಂಡು, ಕೂದಲಿಗೆ ಹಾಕುವ ಅಥವಾ ಸಣ್ಣ ರಬ್ಬರ್ ಅನ್ನು ಕತ್ತರಿಸಿ ಅದನ್ನು ಕುಕ್ಕರ್ನ ರಬ್ಬರ್ಗೆ ಸುತ್ತಬೇಕು. ಈ ಸಣ್ಣ ರಬ್ಬರ್ ಚೆನ್ನಾಗಿ ಸುತ್ತಿದರೆ ಬಳಿಕ ಇದನ್ನು ಕುಕ್ಕರ್ಗೆ ಹಾಕಿದಾಗ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಈ ವೇಳೆ ನೀರು ಸುರಿಯುವುದು ನಿಲ್ಲುತ್ತದೆ.