ಗೋವಿಂದ ಕಥೆ ಇಂದು ಮಿಸ್ ಆಗಿಬಿಟ್ಟಿದ್ರೆ ಗೋವಿಂದ ಗೋವಿಂದ ಆಗಿಬಿಡ್ತಿತ್ತು..! ಆದರೆ ಬಾಲಿವುಡ್ ನಟ ಗೋವಿಂದ ಟೈಮ್ ಚೆನ್ನಾಗಿದೆ. ಪ್ರಾಣಕ್ಕೆ ಸಂಚಕಾರ ತಂದುಕೊಂಡ ಗೋವಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಟ್ಟದಲ್ಲಿ ಹೋಗಬೇಕಾಗಿದ್ದು ಉಗರಲ್ಲಿ ಹೋಗಿದೆ. ಗೋವಿಂದ ಫ್ಯಾನ್ಸ್ ದೇವರಿಗೆ ಪರಿಪರಿಯಾಗಿ ಥ್ಯಾಂಕ್ಸ್ ಹೇಳ್ತಿದಾರೆ. ಬೆಳಿಗ್ಗೆಬೆಳಿಗ್ಗೆ ಹಿಂದಿ ಚಿತ್ರರಂಗವೇ ಒಂದ್ ಕ್ಷಣ ಶೇಕ್ ಶೇಕ್ ಆಗಿದ್ದು ಸುಳ್ಳಲ್ಲ..! ಗೋವಿಂದ ಅಕಸ್ಮಾತ್ ಆಗಿ ತಮ್ಮ ಲೈಸೆನ್ಸ್ ಗನ್ ಚೆಕ್ ಮಾಡೋವಾಗ ಮಿಸ್ ಫೈರ್ ಮಾಡಿಕೊಂಡಿದ್ದಾರೆ. ಗೋವಿಂದ ಬಹಳ ವರ್ಷಗಳಿಂದ ಸುರಕ್ಷತೆಗೆ ಪರವಾನಗಿ ಪಡೆದ ರಿವಾಲ್ವರ್ ಇಟ್ಕೊಂಡಿದ್ರು. ಬೆಳಿಗ್ಗೆ ಚೆಕ್ ಮಾಡೋವಾಗ ಟ್ರಿಗರ್ ತಗುಲಿ ಕಾಲಿಗೆ ಗುಂಡೇಟು ಬಿದ್ದಿದೆ. ಗೋವಿಂದಗೆ ಗುಂಡೇಟು ಬಿದ್ದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿಬಿಟ್ರು. ಸದ್ಯಕ್ಕೆ ಗೋವಿಂದ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡಿತಿರೋ ಗೋವಿಂದ ‘ಐ ಆಮ್ ಫೈನ್ ನೌ’ ಅಂತಿದಾರೆ.
ಯಾಕೋ ಗೋವಿಂದಗೆ ಟೈಮ್ ಸರಿಯಿಲ್ಲ ಎಂಬುದೇ ಬಾಲಿವುಡ್ ನ ಸದ್ಯದ ಬಿಸಿಬಿಸಿ ಚರ್ಚೆ. ಅಂದು ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಗೋವಿಂದ ನಂ.1 ಸಿನಿಮಾಗಳನ್ನ ಮಾಡಿ ನಂ.1 ಎನಿಸಿಕೊಂಡ್ರು. ಸ್ಟಾರ್ ಡಮ್ ಎಂದಿಗೂ ಶಾಶ್ವತವಲ್ಲ ಎಂಬ ಮಾತು ಗೋವಿಂದ ಜೀವನದಲ್ಲಿ ಪ್ರೂವ್ ಆದಷ್ಟು, ಬೇರೆ ಯಾವ್ ಹೀರೊ ಜೀವನದಲ್ಲೂ ಕಾಣಿಸಲೇ ಇಲ್ಲ. ಹೀರೊ ನಂ.1 ಆಗಿ ಮಿಂಚಿದ ಗೋವಿಂದ ಮೇಲೆ ಬಾಲಿವುಡ್ ರಸ್ತೆಯಲ್ಲಿ ಮಾಯವಾಗಿಬಿಟ್ರು. ಬೇಡಿಕೆಯ ಐಟಂ ಗೋವಿಂದ ಯಾರಿಗೂ ಬೇಡವಾಗಿಬಿಟ್ಟಿದ್ರು. ಆಕ್ಟಿಂಗ್ ನಿಂದ ದೂರವಾಗಿದ್ದ ಗೋವಿಂದ ಈಗ ಸುದ್ಧಿಯಾಗ್ತಿರೋದು ಗುಂಡೇಟಿನ ದುರ್ಘಟನೆಯಿಂದ..!
ಡ್ಯಾನ್ಸ್ ಲೋಕದಲ್ಲಿ ತಮ್ಮದೇ ಮಾರ್ಕ್ ಒತ್ತಿದ ಗೋವಿಂದ, ಮಾಡಿದ ಸಿನಿಮಾಗಳೆಲ್ಲವೂ ಹಿಟ್ ಆಗೇಆಗುತ್ತೆ ಎಂಬ ನಂಬಿಕೆ ಬಾಲಿವುಡ್ ನಲ್ಲಿತ್ತು. 10 ವರ್ಷಗಳ ಕಾಲ ಗೋವಿಂದ ಕಾಲ್ ಶೀಟ್ ಸಿಗೋದು ಕಷ್ಟಕಷ್ಟವಾಗಿತ್ತು. ಶೂಟಿಂಗ್ ಸೆಟ್ ಗೆ ಗೋವಿಂದ ಲೇಟ್ ಆಗಿ ಬರ್ತಾರೆ, ಆಟಿಟ್ಯೂಡ್ ತೋರಿಸ್ತಾರೆ, ನಿರ್ದೇಶಕರ ಬಳಿ ಗೋವಿಂದ ಕಿರಿಕ್ ಮಾಡ್ತಾರೆ ಎಂಬೆಲ್ಲಾ ‘ಅಸಲಿ ಗಾಸಿಪ್’ಗಳೇ ಗೋವಿಂದಗೆ ‘ಬಿ-ಟೌನ್’ನಿಂದ ಗೇಟ್ ಪಾಸ್ ಕೊಟ್ಟುಬಿಡ್ತು. ಗೋವಿಂದ ನಿರ್ಮಾಪಕರ ಮನೆಮನೆಗೆ ಹೋಗಿ ನನಗೆ ನಿಮ್ ಸಿನಿಮಾದಲ್ಲಿ ಒಂದೇಒಂದು ಚಾನ್ಸ್ ಕೊಡಿ ಪ್ಲೀಸ್ ಅಂತ ಅಂಗಲಾಚೋ ಪರಿಸ್ಥಿತಿ ಬಂತು. ‘ಸೂಪರ್ ಸ್ಟಾರ್’ ಎಂಬ ಪಟ್ಟ ಮೇಲೆ ಗೋವಿಂದಗೆ ಅಕ್ಷರಶಃ ಕನಸಾಗಿಬಿಡ್ತು.
ಗೋವಿಂದ ಕಾಲಿಟ್ಟ ಕಡೆಯೆಲ್ಲಾ ನಿರಾಸೆಯೇ. ಯಾವ್ ಗೋವಿಂದ ಡ್ಯಾನ್ಸ್ ಹಾಗೂ ಆಕ್ಟಿಂಗ್ ಗೆ ಅಂದು ದಿವಾನಿ ಹೂಮಳೆಯಾಗಿತ್ತೋ, ಇಂದು ಅದೇ ಗೋವಿಂದಗೆ ಸಿನಿಮಾ ಮಾರ್ಕೆಟ್ ಇಲ್ಲ ಎಂಬುದು ಅಷ್ಟೇ ಸತ್ಯ. ‘ಪಾರ್ಟನರ್’ ಸಿನಿಮಾದಲ್ಲಿ ಗೋವಿಂದ ಬ್ಯಾಡ್ ಬಾಯ್ ಸಲ್ಲುಮಿಯಾ ಜೊತೆ ಕಂಬ್ಯಾಕ್ ಮಾಡಿದ್ರೂ, ಆ ಕಂಬ್ಯಾಕ್ ಲಕ್ ತಂದುಕೊಡಲೇ ಇಲ್ಲ. ಟಿವಿ ರಿಯಾಲಿಟಿ ಶೋಗಳಲ್ಲಿ ಪೇಮೆಂಟ್ ಪಡೆದು ಗೋವಿಂದ ಕೊಂಚ ದಿನ ಕಾಲ ತಳ್ಳಿದ್ರು. ರಾಜಕೀಯವೂ ಗೋವಿಂದ ಕೆರಿಯರನ್ನ ಮೇಲೆತ್ತಲಿಲ್ಲ. ಒಂದಲ್ಲ ಒಂದು ದಿನ ಅದೃಷ್ಟ ಓಪನ್ ಆಗುತ್ತೆ ಅಂತ ಕಾದುಕುಳಿತ ಗೋವಿಂದಗೆ ಆ ಗೋಲ್ಡನ್ ಸಮಯ ಬರಲೇ ಇಲ್ಲ.
ಗ್ಲಾಮರ್ ಬಣ್ಣದ ಲೋಕದಲ್ಲಿ ಸ್ಲಿಮ್ ಆಗಿ,ಫಿಟ್ ಆಗಿದ್ರೆ ಮಾತ್ರ ಚಾನ್ಸ್ ಎಂಬುದು ಗೋವಿಂದ ಲೈಫ್ ನಲ್ಲಿ ನಿಜವಾಗಿದೆ. ತಮ್ಮ ಬಾಡಿಶೇಪ್ ಮೈಂಟೇನ್ ಮಾಡದೇ, ಇಂದಿನ ಹೀರೊಗಳಿಗೆ ಕಾಂಪಿಟೇಶನ್ ಕೊಡಲಾಗದೇ ಗೋವಿಂದ ‘ಬಾಲಿವುಡ್’ನಿಂದ ಕಣ್ಮರೆಯಾಗಿದ್ದಾರೆ. ಬಟ್, ಗೋವಿಂದ ಸಮಕಾಲೀನರಾದ ಖಾನ್,ಕಪೂರ್ ಗಳು ಇನ್ನೂ ಮುಂಬೈನಗರಿಯಲ್ಲಿ ಚಾಲ್ತಿಯಲ್ಲಿದ್ದಾರೆ. ಅಂದಿನಿಂದಲೂ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. 25 ವರ್ಷಗಳಿಂದ ಆಕ್ಟಿವ್ ಇರೋ ಹೀರೊಗಳ ಮುಂದೆ ಗೋವಿಂದ ಯಾಕೋ ಸಪ್ಪೆಯೆನಿಸಿದ್ದು ಬ್ಯಾಡ್ ಲಕ್. ಗೋವಿಂದ ತಮ್ಮ ಸಮಯಪ್ರಜ್ಞೆ ಹಾಗೂ ಜಾಣತನದಿಂದ ಹೀರೊಗಿರಿ ಉಳಿಸಿಕೊಳ್ಳಬಹುದಿತ್ತಾ..! ಗೊತ್ತಿಲ್ಲ..!
ಹೀರೊ ಅಂದ್ರೇ ಗೋವಿಂದ, ಗೋವಿಂದ ಅಂದ್ರೇ ಹೀರೊ ನಂ.1 ಎಂಬ ಆ ಪ್ಯಾಪುಲಾರಿಟಿ 90ರ ದಶಕದವರಿಗೆ ಮಾತ್ರ ಗೊತ್ತಿರುತ್ತೆ. ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆಯುಳ್ಳ ಗೋವಿಂದ ಹಲವು ಬಾರೀ ಹೆಸರು ಬದಲಾಯಿಸಿದ್ರೂ, ಗೋವಿಂದ ಹಳೇ ಚಾರ್ಮ್ ಮಾತ್ರ ಹಿಂತಿರುಗಿ ಬರಲೇ ಇಲ್ಲ. ಶಿವಸೇನೆಯಿಂದ ಮತ್ತೆ ಪಾಲಿಟಿಕ್ಸ್ ಗೆ ಗೋವಿಂದ ವಾಪಸ್ ಆಗಿದ್ದಾರೆ. ಮುಂಬೈನಲ್ಲಿ ಸದ್ಯಕ್ಕೆ ಸಿನಿಮಾಗಿಂತ ರಾಜಕೀಯದಲ್ಲೇ ಗೋವಿಂದ ಹೆಸರು ಸಕ್ರಿಯವಾಗಿದೆ. ‘ಜೀರೊ ಟು ಹೀರೊ’ ಆಗಿದ್ದ ಗೋವಿಂದ ಮತ್ತೆ ಸಿನಿಮಾರಂಗದಲ್ಲಿ ತಮ್ಮ ಜಾದೂ ತೋರಿಸ್ತರಾ..? ಗೋವಿಂದ ಆದಷ್ಟುಬೇಗ ಗುಣಮುಖರಾಗಲಿ ಎಂಬ ಪ್ರಾರ್ಥನೆ ಮಾತ್ರ ‘ಚಿ ಚಿ’ ಅಭಿಮಾನಿಗಳದ್ದು..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ