ಬೆಂಗಳೂರು. ರಾಜ್ಯದಲ್ಲಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಸಿದ್ದರಾಮಯ್ಯ ರವರ ಸರ್ಕಾರ ಹೊರಡಿಸಿರುವ ಆದೇಶ ತಾರತಮ್ಯ ಹಾಗೂ ಆವೈಜ್ಞಾನಿಕ ವಾಗಿದ್ದು ಇದಕ್ಕೆ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತೀವ್ರವಾಗಿ ಖಂಡಿಸುತ್ತಿದ್ದು, ಈ ಕರಾಳ ಆದೇಶಕ್ಕೆ ರಾಜ್ಯಾಧ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಜೊತೆಗೆ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಸಿದ್ದರಾಮಯ್ಯನವರಿಗೆ ನಮ್ಮ ಕಾನಿಪ ಧ್ವನಿಯಿಂದ ಕೆಲ ಪ್ರಶ್ನೆಗಳು
1)ಮಾಧ್ಯಮ ಪಟ್ಟಿಯಲ್ಲಿರಲೇಬೇಕೆಂಬ ಮಾನದಂಡಕ್ಕೆ ಸಂಬಂಧಿಸಿದಂತೆ, ಮಾಧ್ಯಮ ಪಟ್ಟಿಯಲ್ಲಿರದ ಪತ್ರಕರ್ತರು ನಕಲಿ ಪತ್ರಕರ್ತರೇ?
2)ತಾವು ಜಾಹಿರಾತಿನಲ್ಲಿ ತಿಳಿಸಿರುವಂತೆ ವಿದ್ಯುನ್ಮಾನ/ಮುದ್ರಣ ಮಾಧ್ಯಮ ಸಂಸ್ಥೆಗಳ 5,222 ಪತ್ರಕರ್ತರಿಗೆ ಮಾತ್ರ ಅನುಕೂಲ. ರಾಜ್ಯದಲ್ಲಿ 5,222 ಮಾತ್ರ ಪತ್ರಕರ್ತರ ಸಂಖ್ಯೆ ಇದೆನಾ.
3)ದಿನ ಪತ್ರಿಕೆ ಹಾಗೂ ವಿದ್ಯುನ್ಮಾನ ಗಳಲ್ಲಿ ಕೆಲಸ ನಿರ್ವಹಿಸುವವರು ಮಾತ್ರ ಪತ್ರಕರ್ತರೇ? ನಿಯತಕಾಲಿಕ ಪತ್ರಿಕೆಗಳಲ್ಲಿ ಅಂದರೆ ವಾರ,ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರು ಪತ್ರಕರ್ತರಲ್ಲವೇ ಅವರೇನಾದರೂ ಭಯೋತ್ಪಾದಕರೇ?
4)ಅರ್ಜಿದಾರರು ಪೂರ್ಣಾವಧಿಗೆ ನೇಮಕಗೊಂಡು ನಾಲ್ಕು ವರ್ಷಗಳಾಗಿರಬೇಕು ಜೊತೆಗೆ ನೇಮಕಾತಿ ಆದೇಶ, ವೇತನ ರಸೀತಿ ಒದಗಿಸಬೇಕೆಂದಿರುವುದು ದುರಾದೃಷ್ಟವೇ ಸರಿ. ಇಂದು ಆಕ್ಸಿಡೇಷನ್ ಹೊಂದಿರುವ ಪತ್ರಕರ್ತರುಗಳಿಗೆ ಮಾಲಿಕರುಗಳು ಖಾಯಂ ನೇಮಕಾತಿ ಆದೇಶ ಪತ್ರ ನೀಡಿರುವುದಿಲ್ಲ ಜೊತೆಗೆ ಕ್ಷೇಮನಿಧಿ ಅಂತೂ ಸಂಪಾದಕರುಗಳಿಂದ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಓಡಾಡಲು ಇಷ್ಟೆಲ್ಲಾ ನಿಯಮಗಳು ಬೇಕಾ ಎಂಬ ಪ್ರಶ್ನೆಗಳು ರಾಜ್ಯದಲ್ಲಿರುವ ಪ್ರತಿಯೊಬ್ಬ ಪತ್ರಕರ್ತರನ್ನು ಕಾಡುತ್ತಿದೆ.
ಆರ್.ಎನ್.ಐ. ಪ್ರಮಾಣ ಪತ್ರ ಪತ್ರಕರ್ತರಿಗೆ ಪರವಾನಿಗೆ
ಪತ್ರ ಇದ್ದಂತೆ, ಇದರ ಜೊತೆ ನಿರಂತರವಾಗಿ ಪ್ರಕಟವಾಗು ಸಂಚಿಕೆಗಳು ಹಾಗೂ ಪ್ರಸಾರ ಸಂಖ್ಯೆಯನ್ನು ಪರಿಗಣಿಸಬೇಕಿತ್ತು ಸರ್ಕಾರ, ಹಿತ್ತಾಳೆ ಕಿವಿ ಹೊಂದಿರುವ ಮಾನ್ಯ ಮುಖ್ಯಮಂತ್ರಿಗಳು ಕೆಲ ಹೊಗಳು ಭಟ್ಟರ ಮಾತಿಗೆ ಮನ್ನಣೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ಅಪರಾಧವೆಸಗಿದಂತಾಗಿದೆ.
ಇನ್ನೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರು ಒಬ್ಬ ವಿತರಕನಾಗಿ, ಪತ್ರಕರ್ತನಾಗಿ ಬಂದಿದ್ದರೂ ಪತ್ರಕರ್ತರ ನೋವು ಇವರಿಗೆ ಮನವರಿಕೆ ಇಂದಿಗೂ ಆಗದಿರುವುದು ವಿಷಾದನೀಯ. ಬರೀ ಸಭೆ ಸಮಾರಂಭಗಳಲ್ಲಿ ರಾಜಕಾರಣಿಯಂತೆ ಪತ್ರಕರ್ತರಿಗೆ ಆಶ್ವಾಸನೆ ಕೊಡವುದೊಂದೆ ಆಗಿದೆ ಎಂದೆನಿಸುತ್ತಿದೆ.
5)ಎರೆಡುವರೆ ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ವಾರ್ಷಿಕ 1800 ಕೋಟಿ ರೂಗಳು ವ್ಯಯ ಮಾಡಿ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್ ಪಾಸ್ ಅದೂ ಆಧಾರಕಾರ್ಡ್ ಎಂಬ ಮಾನದಂಡ ಹೊಂದಿದ್ದರೆ ಸಾಕು ಎಂಬ ನಿಯಮ ವಿಧಿಸಿರುವ ಸಾಮಾಜಿಕ ಹರಿಕಾರರಾದ ಮಾನ್ಯ ಸಿದ್ದರಾಮಯ್ಯನವರು ಕೇವಲ 16 ಕೋಟಿ ರೂಗಳಿಗೆ ಗ್ರಾಮಾಂತರ ಪತ್ರಕರ್ತರಿಗೆ ಇಷ್ಟೆಲ್ಲಾ ಮಾನದಂಡಗಳು ಬೇಕಿತ್ತಾ.ಇದೇನಾ ನಿಮ್ಮ ಸಾಮಾಜಿಕ ಹರಿಕಾರತನ
ಎಂಬ ಪ್ರಶ್ನೆ ಹಾಗೂ ನಿಮ್ಮ ಮುಖವಾಡ ಗೋಚರಿಸುತ್ತಿದೆ ಸಿದ್ದರಾಮಯ್ಯನವರೇ. 7 ಕೋಟಿ ಜನರ ನಾಡಿ ಮಿಡಿತ ಅರಿತಿರುವ ತಾವು 15 ಬಡ್ಡೆಟ್ ಮಂಡಿಸಿರುವ ತಮಗೆ ಕೇವಲ 12,000 ಸಾವಿರ ಗ್ರಾಮಾಂತರ ಪತ್ರಕರ್ತರ ಕಷ್ಟ ಸುಖ ನೋವನ್ನು ಅರಿಯುವುದಲ್ಲಿ ವಿಫಲರಾಗಿದ್ದೀರಿ.
ಎರೆಡುವರೆ ಕೋಟಿ ಮಹಿಳೆಯರಿಗಿರುವ ಬೆಲೆ ರಾಜ್ಯದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜ ತಿದ್ದುವ ಹಾಗೂ ಸಾರ್ವಜನಿಕರು ಸರ್ಕಾರದ ಮಧ್ಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಹನ್ನೆರೆಡು ಸಾವಿರ ಪತ್ರಕರ್ತರಿಗಿಲ್ಲವೇ? ಈ ಎಲ್ಲಾ ಅಂಶಗಳನ್ನು ಮಾನ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು.
6)ಇಷ್ಟೆಲ್ಲಾ ಅಂಕಿ ಅಂಶಗಳ ಸಮೇತ ನಾಡಿನ ಪತ್ರಕರ್ತರುಗಳಿಗೆ ಅನ್ಯಾಯವಾಗಿದ್ದರೂ ಕೂಡ ಕೆಲ ಪತ್ರಕರ್ತರ ಸಂಘಟನೆಗಳು ಸಿದ್ದರಾಮಯ್ಯನವರಿಗೆ ಅಭಿನಂದನೆ ನೆಪದಲ್ಲಿ ಬಹುಪರಾಕ್ ಹಾಡಿ ಪತ್ರಕರ್ತರ ಸಮಾಧಿಗಳ ಮೇಲೆ ಸೌಧ ನಿರ್ಮಾಸಿ ಜೀವನದಲ್ಲಿ ಸಾಧಿಸಿರುವುದು ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯರಾಗಿ ದೊಡ್ಡಸ್ಥಿಕೆ ಸಾಧಿಸುವುದೊಂದೇನಾ ಎಂಬ ನೋವು ಕಾಡುವುದರ ಜೊತೆಗೆ ಯಾವೊಬ್ಬ ತಾಲೂಕು ವರದಿಗಾರರಿಗೂ ದೊಡ್ಡ ದೊಡ್ಡ ಪತ್ರಿಕೆಗಳ ಮಾಲೀಕರು ಇಂದಿನವರೆಗೂ ಖಾಯಂ ನೇಮಕಾತಿ ಆದೇಶ ಪತ್ರ ನೀಡಿಲ್ಲ. ಆ ನಿಟ್ಟಿನಲ್ಲಾದರೂ ನಾವೆಲ್ಲರೂ ಪ್ರಯತ್ನ ನಡೆಸಿ ಸ್ಮಶಾನದ ಹಾದಿ ಹಿಡಿದಿರುವ ನೊಂದಂತ ನಾಡಿನ
ಪತ್ರಕರ್ತರುಗಳಿಗೆ ಆಸರೆಯಾಗೋಣ ವೆನ್ನುತ್ತಾ. ಗ್ರಾಮಾಂತರ ಪತ್ರಕರ್ತರಿಗೆ ಸರ್ಕಾರ ಮಾಡಿರುವ ಆದೇಶ ಬಾರಿ ತಾರತಮ್ಯ ತೋರಿದಂತಿದೆ. ನಾಯಿಯ ಮೊಲೆಯ ಹಾಲು ಪೂಜೆಗೂ ಬರುವುದಿಲ್ಲಿ ಜೊತೆಗೆ ತಿನ್ನುವುದಕ್ಕೂ ಆಗುವುದಿಲ್ಲ ಎಂಬ ಸ್ಥಿತಿಯಲ್ಲಿ ನಮ್ಮ ನಾಡಿನ ಪತ್ರಕರ್ತರು ಎನ್ನುತ್ತಾ ಈಗ ಜಾರಿಯಾಗಿರುವ ಆದೇಶ 5222 ಸಂಖ್ಯೆಯ ಪತ್ರಕರ್ತರಲ್ಲಿ ಕನಿಷ್ಠ 100 ಸಂಖ್ಯೆ ಪತ್ರಕರ್ತರು ಈ ಕಠಿಣ ನಿಯಮದಿಂದ ಪಡೆಯಲು ಸಾಧ್ಯವಿಲ್ಲ.
ಕಾಟಚಾರಕ್ಕೆ ಸರ್ಕಾರ ಇಲ್ಲವೆನ್ನದೇ ಸಮಸ್ತ ಪತ್ರಕರ್ತರ ಕಿವಿಗೆ ಹೂವು ಮುಡಿಸುವ ಕಾರ್ಯದಲ್ಲಿ ತೊಡಗಿರುವುದು ಸ್ಪಷ್ಟ, ಬಂಗ್ಲೆ ಮಲ್ಲಿಕಾರ್ಜುನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ.