ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರ ಹರಿದಾಡುತ್ತಿದೆ. ಯಾವುದೇ ಲೆಟರ್ ಹೆಡ್ ಸೀಲ್ ಏನು ಇಲ್ಲ. ಇದು ಆಂತರಿಕ ಪತ್ರ.
ಇದು ಸರ್ಕಾರಿ ನೌಕರ ಬರೆದಿರುವುದಾ, ಯಾರೋ ಕಿಡಿಗೇಡಿ ಬರೆದಿರೋದಾ ಎಂದು ಗೊತ್ತಾಗುತ್ತಿಲ್ಲ. ನೌಕರ ಬರೆದಿದ್ರೆ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಸಾ ರಾ ಮಹೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಮಾರಸ್ವಾಮಿ ಕೇಂದ್ರ ರಾಜ್ಯದ ಎಲ್ಲ ಅಧಿಕಾರಿಗಳನ್ನು ಒಳ್ಳೆಯ ರೀತಿ ನಡೆಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಕುಮಾರಣ್ಣ ಅವರಿಂದ ನೋವಾಗಿದ್ಯಾ? ಅವರಿಗೆ ನೋವಾಗಿದ್ದರೆ ಅದಕ್ಕೊಂದು ರೀತಿ ನೀತಿ ಇದೆ. ನ್ಯಾಯಾಲಯಕ್ಕೆ ಬೇಕಿದ್ರೆ ಹೋಗಬಹುದಿತ್ತು. ಅದನ್ನು ಬಿಟ್ಟು ಸರ್ಕಾರಿ ನೌಕರ ಕೇಂದ್ರ ಸಚಿವರ ಬಗ್ಗೆ ಈ ರೀತಿ ಪತ್ರ ಹರಿಬಿಟ್ಟಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಬಹಳಷ್ಟು ಪ್ರಾಮಾಣಿಕರು ಇದ್ದಾರೆ ಎಂದರು.