ಬೆಂಗಳೂರು:- ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲೂ ಫಲಾನುಭವಿಗಳಿಗೆ ಶಾಕ್ ಕೊಟ್ಟಿದೆ.
ಕಳೆದ ಮೂರು ತಿಂಗಳುಗಳಿಂದ ಹಣ ಬಿಪಿಎಲ್ ಫಲಾನುಭವಿಗಳ ಕೈಸೇರಿಲ್ಲ. ಹೀಗಾಗಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
https://youtu.be/ewgYFKTvakQ?si=SrCD0tZKWLzQ7XSp
ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಫಾಲಾನುಭವಿಗಳು ಒಟ್ಟಿಗೆ ಸೇರಿ ಸಭೆ ಮಾಡಿ, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹಣವನ್ನೂ ಕೊಡದೆ, ಅಕ್ಕಿಯನ್ನೂ ಕೊಡದೆ ಆಹಾರ ಮತ್ತು ನಾಗಾರೀಕ ಸರಬರಾಜು ಇಲಾಖೆಯ ಜನರಿಗೆ ಟೋಪಿಹಾಕುವ ಕೆಲಸ ಮಾಡುತ್ತಿದೆ. ಮೂರು ತಿಂಗಳಿನಿಂದ ಹಣ ಬಂದಿಲ್ಲ. ಹಣವೂ ಇಲ್ಲದೇ ಅಕ್ಕಿಯೂ ಇಲ್ಲದೇ ಬಡವರ್ಗದ ಜನರು ಪರದಾಡುತ್ತಿದ್ದಾರೆ.
ಅಕ್ಕಿ ಕೊಡುತ್ತೇವೆ ಎಂದು ಅಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದರು. ಇದೀಗ ಒಂದು ವರ್ಷ ಕಳೆಯುತ್ತಾ ಬಂದರೂ ಅಕ್ಕಿ ಕೊಟ್ಟಿಲ್ಲ. ಅಲ್ಲದೇ ಅಕ್ಕಿಯ ಬದಲಾಗಿದೆ ಹಣ ಕೊಡುತ್ತೇವೆ ಎಂದರು. ಆದರೆ ಆರು ತಿಂಗಳು ಹಣ ಹಾಕಿ ಈಗ ಸುಮ್ಮನಾಗಿದ್ದಾರೆ. ನಮಗೆ ಹಣದ ಅಗತ್ಯ ಇಲ್ಲ. ಹಣದ ಬದಲು ನಮಗೆ ಅಕ್ಕಿಯನ್ನೇ ಕೊಡಿ. ಅಥವಾ ಅಕ್ಕಿ ಸಿಗದಿದ್ದರೆ ದಿನಸಿ ಪದಾರ್ಥಗಳನ್ನ ಕೊಡಿ ಎಂದು ಫಲಾನುಭವಿಗಳ ಪರವಾಗಿ ಮಹಿಳೆ ಓರ್ವಳು ಎಂಬವರು ಬೇಡಿಕೆ ಇಟ್ಟಿದ್ದಾರೆ.