ರಾಮನಗರ: ಚನ್ನಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮತ್ತಷ್ಟು ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ನಗರದ ಮೆಹದಿನಗರದಲ್ಲಿ ಪುಟ್ಟ ಮಗುವಿನ ಮೇಲೆ ನಾಯಿದಾಳಿ ಮಾಡಿತ್ತು. ಈಗ ಮತ್ತೆ ನಗರದ ಸಾತನೂರು ಸರ್ಕಲ್ ಬಳಿಯ ಬಡಾವಣೆಯಲ್ಲಿ 4 ವರ್ಷದ ಹೆಣ್ಣುಮಗು ಆಲ್ಫಿಯ ಎಂಬಾಕೆಯ ಮೇಲೆ ಬೀದಿನಾಯಿ ದಾಳಿ ಮಾಡಿ ಮಗುವಿನ ಬಾಯಿಗೆ ಗಂಭೀರ ಗಾಯವಾಗಿದೆ.
ಇನ್ನು ಈ ಬಗ್ಗೆ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ, ಇದರಿಂದಾಗಿ ಪುಟ್ಟಮಕ್ಕಳಿಗೆ ಸಮಸ್ಯೆ ಆಗ್ತಿದೆ. ಬೇಗ ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ.