ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಯಣ, ಸಂಚಾರಿ, ಯಾರಿಗುಂಟು ಯಾರಿಗಿಲ್ಲ, ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಕಿರಣ್ ಗೋವಿ ಗಮನ ಸೆಳೆದಿದ್ದರು.
ಕಿರಣ್ ಗೋವಿ ಅವರಿಗೆ ಬುಧವಾರದಂದು (ಮಾ.25) ಹೃದಯಾಘಾತವುಂಟಾಗಿತ್ತು. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 40ನೇ ವಯಸ್ಸಿಗೆ ಯುವ ನಿರ್ದೇಶಕ ಕಿರಣ್ ಗೋವಿ ಇಹಲೋಕ ತ್ಯಜಿಸಿದ್ದಾರೆ.. ಯುವ ನಿರ್ದೇಶಕನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಸಂತಾಪ ಸೂಚಿಸಿದ್ದಾರೆ.
ಕಿರಣ್ ಗೋವಿ ಮೂಲತಃ ತುಮಕೂರಿನವರಾಗಿದ್ದು, ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿದ್ದರು. ಕಿರಣ್ ಗೋವಿ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಾರಣ ಕಿರಣ್ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು. ಆ ಬಳಿಕ ನಿರ್ದೇಶಕರಾಗಿ ಭಡ್ತಿ ಪಡೆದು ಖ್ಯಾತಿ ಘಳಿಸಿದ್ದರು.