ದಿನಕ್ಕೊಂದು ಚಿತ್ರ ವಿಚಿತ್ರ ಬಟ್ಟೆ ಧರಿಸಿ ಕ್ಯಾಮೆರಾ ಮುಂದೆ ಬರುವ ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ನಾನಾ ರೀತಿಯಲ್ಲಿ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಊರ್ಫಿ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಹೊಸ ಹೊಸ ವೇಷ ಧರಿಸಿ ಬರುತ್ತಲೆ ಇರುತ್ತಾರೆ. ಸದಾ ಬಟ್ಟೆಗಳ ವಿಷಯದಲ್ಲೇ ಸದ್ದು ಮಾಡೋ ಉರ್ಫಿ ಈ ಬಾರಿ ಪ್ರೀತಿ-ಪ್ರೇಮದ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಸದಾ ಹಾಟ್ ಲುಕ್ ಮೂಲಕ ಇಂಟರ್ನೆಟ್ ಬೆಂಕಿ ಹಚ್ತಿದ್ದ ನಟಿ ಈಗ ಉರ್ಫಿ ಜಾವೇದ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಉರ್ಫಿ ಹಂಚಿಕೊಂಡಿರುವ ಫೋಟೋ. ಉರ್ಫಿ ಪೋಸ್ಟ್ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಉರ್ಫಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ ಅವನು ಯೆಸ್ ಎಂದ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಊರ್ಫಿ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ.
ಉರ್ಫಿ ಈ ಹಿಂದೆ ಮಾಡೆಲ್ ಪರಾಸ್ ಕಲ್ನಾವತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಉರ್ಫಿ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾರು ಎಂದು ರಿವೀಲ್ ಮಾಡಿಲ್ಲ. ಆದ್ರೆ ಈ ಪೋಸ್ಟ್ ಊರ್ಫಿಯ ಮದುವೆಯ ಕುರಿತಾಗಿದ್ದ ಅಥವಾ ಬೇರೆ ಯಾವುದಾದರು ವಿಷಯಕ್ಕಾ ಎಂಬುದನ್ನು ಕಾದು ನೋಡಬೇಕಿದೆ.