ನಟ ಅಭಿಷೇಕ್ ಅಂಬರೀಶ್ ಇತ್ತೀಚಿಗಷ್ಟೇ ಬಹುಕಾಲದ ಗೆಳತಿ ಅವಿವಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ಆಗುವವರೆಗೂ ತಮ್ಮ ಪ್ರೀತಿಯ ವಿಷಯವನ್ನು ಸಾಕಷ್ಟು ಗುಟ್ಟಾಗಿ ಇಟ್ಟಿದ್ದ ಅಭಿಷೇಕ್ ಅಂಬರೀಶ್ ಇದೀಗ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
ನಟ ಅಂಬರೀಶ್ ಹಾಗೂ ಅವಿವಾ ತಂದೆ ಪ್ರಕಾಶ್ ಬಿದ್ದಪ್ಪ ಹಲವು ವರ್ಷಗಳಿಂದ ಸ್ನೇಹಿತರು. ಎರಡು ಫ್ಯಾಮಿಲಿ ಸಾಕಷ್ಟು ವರ್ಷಗಳಿಂದ ಪರಿಚಿತರು. ಫ್ಯಾಷನ್ ಇವೆಂಟ್ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಅವರ ಮೊದಲು ಭೇಟಿಯಾಗಿದ್ದಾರೆ. ಅಲ್ಲಿ ಆರಂಭವಾದ ಅವರ ಸ್ನೇಹ ಬಳಿಕ ಪ್ರೀತಿಗೆ ತಿರುಗಿದೆ. ಸುಮಾರು 4-5 ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಜೋಡಿ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರ ತಿಳಿಸಿ, ಹಿರಿಯರ ಒಪ್ಪಿಗೆಯ ಪಡೆದು ಇತ್ತೀಚಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಭಾವಿ ಪತ್ನಿಯ ಬಗ್ಗೆ ಮಾತನಾಡಿರುವ ಅಭಿಷೇಕ್, ಅವಿವಾ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ. ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ಇಬ್ಬರ ನಡುವೆ ಮ್ಯೂಚುಯಲ್ ಸಪೋರ್ಟ್ ಇದೆ. ಕಪಲ್ ಅಂದ ಮೇಲೆ ಜಗಳ ಸಹಜ. ಜಗಳ ಮಾಡಿದ್ದರೂ ಬಿಟ್ಟು ಹೋಗದೇ ಇರುತ್ತೀನಿ ಎನ್ನುವವರನ್ನು ಮದುವೆ ಮಾಡಿಕೊಳ್ಳಬೇಕು ಅಂತಾ ನನ್ನ ತಾಯಿ ಹಾಗೂ ಅವಿವಾ ತಂದೆ-ತಾಯಿ ಹೇಳುತ್ತಾರೆ. ನಮ್ಮ ನಡುವೆ ಜಗಳ ನಡೆದರೆ ತಪ್ಪು ಮಾಡಿರುವವರು ಮೊದಲು ಕ್ಷಮೆ ಕೇಳಬೇಕು. ನಾನು ತಪ್ಪು ಮಾಡಿದರೆ ಅವಿವಾ ಕಾಂಪ್ರಮೈಸ್ ಆಗುತ್ತಾರೆ. ಅವರು ತಪ್ಪು ಮಾಡಿದ್ದರೂ ಅವರೇ ಕಾಂಪ್ರಮೈಸ್ ಆಗುತ್ತಾರೆ. ಮನೆಯಲ್ಲಿ ಸಪೋರ್ಟ್ ಚೆನ್ನಾಗಿದ್ದರೆ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಬಹುದು. ಅದಕ್ಕೆ ನನ್ನ ತಂದೆ ತಾಯಿನೇ ಸಾಕ್ಷಿ ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಸದ್ಯ ಅಭಿಷೇಕ್ ನಟನೆಯ 2ನೇ ಸಿನಿಮಾ `ಬ್ಯಾಡ್ ಮ್ಯಾನರ್ಸ್’ ರಿಲೀಸ್ ಗೆ ರೆಡಿಯಾಗಿದ್ದು ಮೇ ಅಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ರಿಲೀಸ್ ಬಳಿಕ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.