ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ಸಾಕಷ್ಟು ಜನರನ್ನ ಆಕರ್ಷಿಸುವ ಸ್ಥಳ ಇಲ್ಲಿನ ಲೈಬ್ರರಿ ಕೂಡ ಅಷ್ಟೇ ಫೇಮಾಸ್ ಆಗಿತ್ತು. ಆದರೆ ಈಗ ಲೈಬ್ರೈರಿ ಕ್ಲೋಸ್ ಆಗಿದ್ದು, ಓದುಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿ ಮಾಡುಸ್ತೀವಿ ಅಂತ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ದಾರೆ.
ಓದುಗರಿಗೆಂದೇ ಲಾಲ್ ಬಾಗ್ನಲ್ಲಿ ಸಾರ್ವಜನಿಕ ಗ್ರಾಂಥಾಲಯವನ್ನ ತೆರೆಯಲಾಗಿತ್ತು. ಇಲ್ಲಿ ಪ್ರತಿದಿನ ಮುಂಜಾನೆ ವಾಕಿಂಗ್ ಗೆ ಬಂದಂತಹವರು, ವಿದ್ಯಾರ್ಥಿಗಳು, ಸ್ಫರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಸೇರಿದಂತೆ ಸಾಕಷ್ಟು ಜನರು ತಮಗೆ ಇಷ್ಟದ ಪುಸ್ತಕಗಳನ್ನ ಓದುತ್ತಿದ್ರು. ಆದ್ರೆ ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿಗಾಗಿ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ದಾರೆ.