ವಿಜಯಪುರ:- ರೈತರಲ್ಲಿ ಭಯ ಮೂಡಿಸಿದ್ದ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಅರಣ್ಯಾಧಿಕಾರಿಗು ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾ. ಸೋಮಜಾಳ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎನ್ನಲಾಗಿದೆ.
L ೋಮಜಾಳ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ನಿನ್ನೆ ಮುಂಜಾನೆ ಸೋಮಜಾಳ ಸುತ್ತಮುತ್ತ ಚಿರತೆ ಕಂಡು ಬಂದಿದೆ.
ಚಿರತೆ ಕಂಡಿದ್ದರಿಂದ ಸೋಮಜಾಳ ಗ್ರಾಮಸ್ತರು ಆತಂಕಗೊಂಡಿದ್ದರು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಬೋನು ಇರಿಸಿದ 24 ಗಂಟೆಯಲ್ಲೆ ಚಿರತೆ ಬಲೆಗೆ ಬಿದ್ದಿದೆ.
ಕಳೆದ ತಿಂಗಳು ಮುದ್ದೇಬಿಹಾಳ ತಾಲೂಕಿನಲ್ಲು ಚಿರತೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.