ಗುಜರಾತ್:- ಗುಜರಾತ್ನ ಸೂರತ್ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ಅಣ್ಣನೊಬ್ಬ 13 ವರ್ಷದ ತಂಗಿ ಮೇಲೆ ರೇಪ್ ಮಾಡಿದ್ದು, ಆಕೆ ಈಗ ಗರ್ಭಿಣಿ ಆಗಿರುವ ಘಟನೆ ಜರುಗಿದೆ.
ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ.
ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ. ಬಾಲಕಿ ನಿರಾಕರಿಸಿದಾಗ ಆತ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿ, ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಘಟನೆ ಬಳಿಕ ಬಾಲಕಿಯ ತಾಯಿ ಸೆ.30ರಂದು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೋಲೀಸರ ಪ್ರಕಾರ, ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಕೆಲಸಕ್ಕಾಗಿ ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಡುತ್ತಿದ್ದರು ಮತ್ತು ಅವರ ಇಬ್ಬರೂ ಮಕ್ಕಳು ಮನೆಯಲ್ಲಿ ಇರುತ್ತಿದ್ದರು.
8 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಶಾಲೆಯಲ್ಲಿ ಹೊಟ್ಟೆ ನೋವೆಂದು ಒದ್ದಾಡಿದ್ದಳು, ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದರು. ಈ ವರ್ಷದ ಜುಲೈನಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಮೊಬೈಲ್ ಫೋನ್ನಲ್ಲಿ ಅಶ್ಲೀಲತೆಯನ್ನು ವೀಕ್ಷಿಸಿದ ಒಂಬತ್ತು ವರ್ಷದ ಬಾಲಕಿಯನ್ನು ಆಕೆಯ 13 ವರ್ಷದ ಸಹೋದರ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈದಿರುವ ಘಟನೆಯೂ ನಡೆದಿತ್ತು.