ಬೆಂಗಳೂರು: ನಿರೀಕ್ಷೆಯಂತೆ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ.
ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ.
ಕಳೆದುಕೊಂಡಿದ್ದಾರೆ.
ಯಾವುದು ಎಷ್ಟು ಇಳಿಕೆ?
ಸೆನ್ಸೆಕ್ಸ್ 1,769.19 (-2.10%) ಅಂಕ ಕುಸಿದು 82.497.1ರಲ್ಲಿ ಕೊನೆಯಾಯಿತು. ನಿಫ್ಟಿ 50 546.80(-2.12%) ಇಳಿಕೆಯಾಗಿ 25,250.1ರಲ್ಲಿ ಮುಕ್ತಾಯಗೊಳಿಸಿತು. ನಿಫ್ಟಿ ಮಿಡ್ಕ್ಯಾಪ್ 100 1,333.60 (-2.04%) ಅಂಕ ಕುಸಿದು 59,024.7 ರಲ್ಲಿ ಕೊನೆಯಾಯಿತು.
ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್ಕ್ಯಾಪ್ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್ ಕ್ಯಾಪ್ ವ್ಯಾಪ್ತಿಯಲ್ಲಿ ಬರುತ್ತವೆ.