ವಿಜಯಪುರ : ಕೇಂದ್ರದ ಇಂಟಲಿಜೆನ್ಸ್ ಫೇಲ್ಯೂವರ್ ಆಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರ ಸಂಬಂಧ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಕ್ಯಾತನಕೇರಿ ಗ್ರಾಮದ ಬಳಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪರಮೇಶ್ವರ ಅವರು ಏನಾದ್ರು ಹೇಳಲಿ ಇಡೀ ದೇಶದ ಜನರಿಗೆ ಗೊತ್ತಿದೆ ಮೋದಿಯವರದ್ದು ಎಷ್ಟು ಗಂಡಸ್ತನ ಇದೆ ಎಂಬುದು ಇವರ ಪುಸಲಾಯಿತಿ ಇಂದಲೇ ಒಳಗೆ ಬರುತ್ತಾರೆ.
ನಿನ್ನೆ ಐದಾರು ಜನರನ್ನು ಹಿಡಿದಿದ್ದಾರೆ, ಅವರಿಗೆ ಒಳಗೆ ತಂದು ಸೇರಿಸಿದವರಾರು. ಪಾಕಿಸ್ತಾನದವರನ್ನು ತಂದು ಒಳಗೊಳಗೆ ತಂದು ಬಿಟ್ಟಿದ್ದು ನೀವೇ ತಾನೇ ಎಂದ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.