ನಟ ಚಿರಂಜೀವಿ ಸರ್ಜಾ ಸಣ್ಣ ವಯಸ್ಸಿನಲ್ಲೇ ನಿಧನರಾಗಿದ್ದು ಸಿನಿಮಾ ರಂಗಕ್ಕೆ ದೊಡ್ಡ ಆಘಾತ ಉಂಟುಮಾಡಿತ್ತು. ‘ರಾಜಮಾರ್ತಂಡ’ ಚಿತ್ರದಲ್ಲಿ ಚಿರು ನಾಯಕರಾಗಿ ನಟಿಸಿದ್ದು, ಚಿತ್ರೀಕರಣ ಕೂಡ ಮುಕ್ತಾಯವಾಗಿತ್ತು. ಇನ್ನೆನ್ನೂ ಡಬ್ಬಿಂಗ್ ಮಾಡಬೇಕು ಎಂಬಷ್ಟರಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿದ್ದರು.
ಆ ಬಳಿಕ ‘ರಾಜಮಾರ್ತಂಡ’ ಚಿತ್ರ ಪೂರ್ಣ ಗೊಳಿಸಲು ಮೇಘನಾರಾಜ್ , ಧ್ರುವ ಸರ್ಜಾ ಹಾಗೂ ಕುಟುಂಬದವರು ಸಾಥ್ ನೀಡಿದ್ದರು. ಅಣ್ಣನ ಪಾತ್ರಕ್ಕೆ ನಟ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದು, ಡಬ್ಬಿಂಗ್ ವೇಳೆ ಅಣ್ಣನನ್ನು ನೆನೆದು ಧ್ರುವ ಕಣ್ಣೀರು ಹಾಕಿದ್ದರು.
ಸದ್ಯ ರಾಜಮಾರ್ತಂಡ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದ್ದು, ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಬಿಡುಗಡೆ ವೇಳೆ ಮೇಘನರಾಜ್, ಧ್ರುವ ಸರ್ಜಾ, ಸುಂದರರಾಜ್ ಹಾಗೂ ಕನ್ನಡದ ಅನೇಕ ಹೆಸರಾಂತ ನಟರು ಚಿತ್ರತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ. ಚಿರು ನಟನೆಯ ಕೊನೆಯ ಸಿನಿಮಾ ನೋಡೋಕೆ ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ.