ಬಿಗ್ಬಾಸ್ ಕನ್ನಡ ಸೀಸನ್ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್ ನ ಮೊದಲ ಪಂಚಾಯಿತಿಗೆ ಕಿಚ್ಚ ಸುದೀಪ್ ಬರಿಗಾಲಲ್ಲಿ ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಟಿವಿಯಲ್ಲಿ ಒಂದೂವರೆ ಗಂಟೆ ಪ್ರಸಾರವಾಗುವ ಬಿಗ್ ಬಾಸ್ ಶೋ ಗೆ ಗಂಟೆಗಟ್ಟಲೆ ನಿಂತುಕೊಂಡೇ ಶೂಟಿಂಗ್ ಮಾಡಬೇಕಿದೆ. ಈ ವೇಳೆ ಸುದೀಪ್ ಚಪ್ಪಲಿ ಹಾಕದೆ ನಿಂತೇ ಶೂಟಿಂಗ್ ಮಾಡಿದ್ದಾರೆ. ದಿನಾಲು ಚಪ್ಪಲಿ ಧರಿಸುವವರಿಗೆ ಬರಿಗಾಲಲ್ಲಿ ಇರುವುದು ಕಷ್ಟವೇ ಆಗುತ್ತದೆ. ಅಂತಹದರಲ್ಲಿ ಗಂಟೆಗಟ್ಟಲೆ ಚಪ್ಪಲಿ ಹಾಕಿದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವುದು ಕಿಚ್ಚನ ಮೇಲೆ ಅಭಿಮಾನ ಹೆಚ್ಚಿಸಿದೆ.
ಇನ್ನು ಕಿಚ್ಚ ಸುದೀಪ್ ಅವರ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್ ಲುಕ್ ಕೊಡುತ್ತಿತ್ತು. ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ ಆರ್ನಮೆಂಟ್ಸ್ ಧರಿಸಿದ್ದರು. ಇದು ಕಿಚ್ಚನ ಕೂಲ್ ಲುಕ್ ಗೆ ಹೇಳಿ ಮಾಡಿಸಿದಂತಿತ್ತು. ಅಂದ ಹಾಗೆ ಕಿಚ್ಚನ ಕಾಸ್ಟ್ಯೂಮ್ ನೋಡಲು ಸಿಂಪಲ್ ಆಗಿ ಕಾಣಿಸಿದ್ದರು ಲಕ್ಷಾಂತರ ರೂಪಾಯಿ ಎಂದು ಹೇಳಲಾಗುತ್ತಿದೆ.
ಇನ್ನು ಮನೆಯ ಎಲ್ಲರನ್ನೂ ಮಾತನಾಡಿಸಿದ ಕಿಚ್ಚ , ಮನೆಯಲ್ಲಿ ಕಳೆದ ದಿನಗಳ ಬಗ್ಗೆ ಪ್ರಶ್ನಿಸಿ 1 ನಿಮಿಷದೊಳಗೆ ಉತ್ತರಿಸುವಂತೆ ಹೇಳಿದರು. ಜೊತೆಗೆ 1 ನಿಮಿಷ ಎಷ್ಟು ಅಮೂಲ್ಯವಾದ ಸಮಯ ಎಂಬುದನ್ನು ಅರ್ಥ ಮಾಡಿಸಿದರು. ಇದರ ಜೊತೆಗೆ ಮನೆಯ ಕ್ಯಾಪ್ಟನ್ ಹಂಸಾ ಅವರ ತಪ್ಪುಗಳನ್ನು ಅವರಿಗೆ ತಿಳಿಸಿ ಹೇಳಿದರು. ಎಲ್ಲೆಲ್ಲಿ ಸ್ಪರ್ಧಿಗಳು ಎಡವಿದ್ದೀರಿ ಎಂಬುದನ್ನು ತಿಳಿಸಿ ಕೊಟ್ಟರು. ಅಲ್ಲದೆ ಪದೇ ಪದೇ ಬಿಗ್ ಬಾಸ್ ಅವಮಾನಿಸುತ್ತ, ಎಲ್ಲರನ್ನು ದೂಷಿಸುತ್ತಿದ್ದು ಲಾಯರ್ ಜಗದೀಶ್ ಗೆ ಕಿಚ್ಚ ಖಡನ್ ವಾರ್ನಿಂಗ್ ನೀಡಿದರು.