ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆದ್ರೆ ದಿನೇ ದಿನೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗುತ್ತಿದೆ. ಇದೀಗ ಇದೇ ಮೊದಲ ಭಾರಿಗೆ ದರ್ಶನ್ ಬಂಧನದ ಬಗ್ಗೆ ಸಹೋದರ ಮೌನ ಮುರಿದಿದ್ದಾರೆ. ದಿನಾಕರ್ ಹೇಳಿದ ಮಾತೊಂದು ದರ್ಶನ್ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
ದರ್ಶನ್ ಸೋದರ ದಿನಕರ್ ತೂಗುದೀಪ್ ತಮ್ಮ ನಿರ್ದೇಶನದ ಐದನೇ ಸಿನಿಮಾ ರಾಯಲ್ ಚಿತ್ರದ ಹಾಡಿನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದೇ ವೇದಿಕೆ ಮೇಲೆ ದಿನಕರ್ ಆಡಿದ ಮಾತು 2011ರ ದರ್ಶನ್ ಸಿನಿ ಬದುಕಿನ ಪುನರ್ಜನ್ಮದ ಹಿಸ್ಟರಿ ರಿಪೀಟ್ ಮಾಡುವಂತಿದೆ.
ನಮಗ್ಯಾವುದೇ ಸಮಸ್ಯೆ ಇರಲಿ ಏನೇ ಇರಲಿ ಯಾವಾಗಲೂ ಸಪೋರ್ಟ್ ಮಾಡೋ ಸೆಲೆಬ್ರೆಟೀಸ್ಗೆ ನಮ್ಮ ಫ್ಯಾಮಿಲಿ ಮತ್ತು ದರ್ಶನ್ ಮೇಲಿನ ಸಪೋರ್ಟ್ ಹೀಗೆ ಇರಲಿ. ನಿಮ್ಮ ಪ್ರೀತಿಗೆ ನಾವು ಯಾವಾಗಲೂ ಚಿರಋಣಿ. ನಾವೇನೇ ಹೆಸರು ಮಾಡಿದ್ರೂ, ಅದು ನಿಮ್ಮಿಂದ. ಇಷ್ಟು ದಿನ ನಾನೆಲ್ಲೂ ಹೋಗಿರಲಿಲ್ಲ. ಕಾರಣ ಪರಿಸ್ಥಿತಿ ಅನ್ನೋ ಮೂಲಕ ದರ್ಶನ್ ಸೋದರ ದಿನಕರ್ ಮಹತ್ವದ ಸುಳಿವು ನೀಡಿದ್ದಾರೆ.
ಡಿ ಬಾಸ್ ಡಿ ಬಾಸ್ ಅನ್ನೋ ದರ್ಶನ್ ಫ್ಯಾನ್ಸ್ ಜೈಕಾರದ ಮಧ್ಯೆಯೇ ದಿನಕರ್ ತೂಗುದೀಪ್ ಅಣ್ಣನಂತೆಯೇ ಸೆಲೆಬ್ರಿಟಿಗಳ ಋಣ ನೆನೆದು ಭಾವುಕರಾದ್ರು. ಅಷ್ಟೇ ಅಲ್ಲ. ಎಂಥಾ ಸ್ಥಿತಿಯಲ್ಲಿ ತಾವಿದ್ದೀವಿ. ಆದಾಗ್ಯೂ, ಕಷ್ಟ ಕಾಲದಲ್ಲೂ ಗಟ್ಟಿಯಾಗಿ ಜೊತೆ ನಿಂತ ಎಲ್ಲಾ ಅಭಿಮಾನಿಗಳಿಗೆ ಶಿರಬಾಗಿಸಿ ನಮಸ್ಕಾರ ಸಮರ್ಪಿಸಿದ್ರು. ಜೊತೆಗೆ ಇದೀಗ ನೀವಿದ್ರೆ ಡಿ ಬಾಸ್ಗೆ ಏನೂ ಆಗೋದಿಲ್ಲ. ಡಿ ಬಾಸ್ನ ಏನೂ ಮಾಡೋಕಾಗಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ 120 ದಿನಗಳೇ ಉರುಳುತ್ತಿವೆ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಬೇಲ್ ಟೆನ್ಷನ್ನಲ್ಲೇ ದಿನದೂಡುತ್ತಿದ್ದಾರೆ. ಇದರ ನಡುವೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅಣ್ಣನ ಬಗ್ಗೆ ಮಾತಾಡಿದ್ದಾರೆ. ಕೇಸ್ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ಪ್ರತಿವಾರ ಅಣ್ಣನನ್ನು ನೋಡಲು ಜೈಲಿಗೆ ಭೇಟಿ ನೀಡ್ತಿದ್ದ ದಿನಕರ್ ನಿಮ್ಮ ಪ್ರೀತಿ ಇರುವವರೆಗೆ ಡಿ ಬಾಸ್ಗೆ ಯಾರೂ ಏನು ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.