ಹುಬ್ಬಳ್ಳಿ : ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ದತ್ತಾತ್ರೇಯ ಮಂದಿರದ ಮೂರ್ತಿ ಭಗ್ನವಾಗಿದ್ದಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಗ್ನವಾದ ದೇವಾಲಯ ಪರಿಶೀಲನೆ ಮಾಡಿ ಹೇಳಿಕೆ ನೀಡಿರುವ ಶಾಸಕ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಯಾರೇ ಹಾಳು ಮಾಡಿದರೂ 24 ಗಂಟೆ ಒಳಗೆ ಬಂಧಿಸಬೇಕು.
ವಿಜ್ರಂಭಣೆಯಿಂದ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ದುಷ್ಕರ್ಮಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾರು ತಪ್ಪು ಮಾಡಿದ್ದಾರೆ ಎಂದು ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನು ಹಿಂದು ಹಬ್ಬ ದಿನಗಳಲ್ಲಿಯೇ ರಜೆ ಕಡಿತ ಮಾಡುವ ವಿಚಾರ
ಯಾವುದೇ ಸರ್ಕಾರಿ ರಜೆ ಇದ್ದಾಗ ಚಾಟ್ ಇರುತ್ತದೆ. ಹೀಗಿದ್ದಾಗ ರಜೆಯನ್ನು ಕಡತ ಮಾಡಬಾರದು. ಮುಸ್ಲಿಂ ಹಬ್ಬ ದಿನಗಳಲ್ಲಿ ನಮಾಜ್ ಇರುತ್ತದೆ. ಕ್ಯಾಲೆಂಡರ್ ಇವೆಂಟ್ ಅನೌನ್ಸ್ ಆದ ಮೇಲೆ ಹಾಗೆ ಮಾಡಬೇಕು ದಿನಾಂಕ ಅದಲು ಬದಲು ಮಾಡುತ್ತಾರೆ. ಚಂದಪ್ಪ ಕಾಣಿಸಿದಾಗ ದಿನಾಂಕ ಚೇಂಜ್ ಮಾಡ್ತೀರಿ, ಧರ್ಮದ ಹಬ್ಬದಲ್ಲಿ ಹೀಗೆ ಮಾಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಇಳಿಲಿ ಬಿಡಲಿ ಜಾತಿ ಗಣತಿ ಬಿಡುಗಡೆ ಮಾಡಬೇಕು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರ
ದಸರಾ ನಂತರ ಅವರು ಕೆಳಗೆ ಇಳಿಯುತ್ತಾರೆ. ಸುಮಾರು ಗದ್ದಲವಾಗಿದೆ ಎನ್ನುವ ಆರೋಪವಿದೆ. ಸಾರ್ವಜನಿಕವಾಗಿ ಕೆಲವೆಡೆ ಹಿಂದೂ ಕ್ರಿಶ್ಚಿಯನ್ ಅಂತ ಬರೆಸಿದ್ದಾರೆ. ಬೇಡ ಅಂದಾಗ ಜಾತಿ ಗಣತಿ ಯಾಕೆ ಮಾಡಿಸಬೇಕಿತ್ತು. ಅದು ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಳ ಆಂತರಿಕ ಬೇಗುದಿ ಹರಿಪ್ರಸಾದ ಅವರಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ಬಿಡುಗಡೆ ಮಾಡಲು ಹೇಳಿದ್ದಾರೆ. ಲೋಕಾಯುಕ್ತ ತನಿಖೆ ಸರಿಯಾಗದು. ಅವರೇ ಸಿಎಂ ಆದಾಗ, ಸರಿಯಾದ ತನಿಖೆ ಸಾಧ್ಯವೇ ಇಲ್ಲ. ಸಿಬಿಐ ತನಿಖೆಯಾಗಲಿ. ಸತ್ಯಾಂಶ ಹೊರಗೆ ಬರಲಿದೆ.
ಬಂಡೆ ತಾನೇ ಮುಂದಿನ ಸಿಎಂ ಅಂತಾ ಬಿಂಬಿಸುತ್ತಿರುವುದು, ಸಿಎಂ ಸ್ಥಾನಕ್ಕೆ ಎಂಬಿ. ಪಾಟೀಲ್ ಆರ್.ವಿ. ದೇಶಪಾಂಡೆ, ಜಾರಕಿಹೊಳಿ ಅವರು ಸಹ ಹೇಳುತ್ತಿದ್ದಾರೆ. ಐದು ವರ್ಷ ಎನ್ನುವವರೇ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲು ಯತ್ನ ನಡೆಸುತ್ತಿದ್ದಾರೆ. ದೇಶದ ಹಿತದ ಬಗ್ಗೆ, ವಿದೇಶಕ್ಕೆ ಹೋಗಿ ದೇಶದ ಬಗ್ಗೆ ಅವಹೇಳನಕಾರಿ ಮಾತನಾಡುತ್ತೀರಿ. ರಚನಾತ್ಮಕ ಹೋರಾಟ ಮಾಡಲಿ. ಹನ್ನೊಂದು ವರ್ಷ ಒಂದು ಕಪ್ಪುಚುಕ್ಕೆ ಇಲ್ಲದೆ ಮೋದಿ ಆಡಳಿತ ನಡೆಯುತ್ತಿದೆ. ಜಗತ್ತೇ ಒಪ್ಪಿಕೊಳ್ಳುತ್ತಿದೆ. ರಾಹುಲ್ ಗಾಂಧಿ ವಕ್ಫ್ ಕೈ ಬಿಡಲಿ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.