ಮೆಗಾಸ್ಟಾರ್ ಚಿರಂಜೀವಿ ಕಳೆದ 30 ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಚಿರಂಜೀವಿ ವಾಲ್ಟೇರ್ ವೀರಯ್ಯ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ವಿಶ್ವಂಭರ ಚಿತ್ರದೊಂದಿಗೆ ಮತ್ತೆ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅದೇ ವೇಳೆ ನಟ ತಮ್ಮ ಆದಾಯವನ್ನು ಹೂಡಿಕೆ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಗಣನೀಯ ಹೂಡಿಕೆಗಳನ್ನು ಮಾಡುತ್ತಿರುವ ಚಿರಂಜೀವಿ ಹೈದರಾಬಾದ್ನಲ್ಲಿರುವ ಅತ್ಯಂತ ದುಬಾರಿ ಆಸ್ತಿಗಳನ್ನು ಹೊಂದಿದ್ದಾರೆ. ಇದೀಗ ಊಟಿಯಲ್ಲಿ 5.5 ಎಕರೆಯ ಬರೋಬ್ಬರಿ 16 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ.
ಚಿರಂಜೀವಿ ಅವರು ಈಗಾಗಲೇ ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಹೊಂದಿದ್ದಾರೆ. ಇದೀಗ ಊಟಿಯ ಗುಡ್ಡದ ಪ್ರದೇಶದಲ್ಲಿ 5.5 ಎಕರೆ ಜಾಗವನ್ನು ಖರೀದಿಸಿದ್ದು, ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಈ ಜಾಗಕ್ಕೆ ಅವರು 16 ಕೋಟಿ ರೂ. ನೀಡಿದ್ದಾರೆ ಎನ್ನಲಾಗುತ್ತಿದೆ.
ಚಿರಂಜೀವಿ ಖರೀದಿಸಿದ ಊಟಿಯ ಪ್ರಾಪರ್ಟಿಗೆ ಇತ್ತೀಚೆಗೆ ರಾಮ್ ಚರಣ್ ಮತ್ತು ಉಪಾಸನಾ ಕೂಡ ಭೇಟಿ ನೀಡಿದರು. ಅವರು ಅಲ್ಲಿ ಐಷಾರಾಮಿ ಫಾರ್ಮ್ಹೌಸ್ ನಿರ್ಮಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅನುಮತಿ ಪಡೆಯಲು ಪ್ರಸ್ತುತ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ವಿವಿಧ ಸ್ಥಳಗಳಲ್ಲಿ ಚಿರಂಜೀವಿ ಮನೆ, ನಿವೇಷನ, ಆಸ್ತಿ ಹೊಂದಿದ್ದಾರೆ. ರಜಾದಿನಗಳಿಗಾಗಿ ಗೋವಾ ಮತ್ತು ಊಟಿಯಂತಹ ಸ್ಥಳಗಳಲ್ಲಿ ಕಳೆಯಲು ಚಿರಂಜೀವಿ ಈ ಸ್ಥಳಗಲ್ಲಿ ನಿವೇಷನ ಖರೀದಿಸಿದ್ದಾರೆ.. ಗೋವಾ ಆಸ್ತಿ ಬಹುತೇಕ ಸಿದ್ಧವಾಗಿದೆ. ಮಗ ರಾಮ್ ಚರಣ್ ಅವರ ಅಭಿರುಚಿಗೆ ಅನುಗುಣವಾಗಿ ಮನೆ ನಿರ್ಮಿಸಲಾಗಿದೆ. ಚಿರಂಜೀವಿ ಅವರು ಚೆನ್ನೈನಲ್ಲಿ ಎರಡು ಬಂಗಲೆಗಳನ್ನು ಹೊಂದಿದ್ದಾರೆ. ಹೈದರಾಬಾದ್ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಅವರಿಗೆ ಗಣನೀಯ ಆಸ್ತಿ ಇದೆ.
ಚಿರಂಜೀವಿ ಅವರು ಹೈದರಾಬಾದ್ನಲ್ಲಿ ವಿಶಾಲವಾದ ಮತ್ತು ಐಷಾರಾಮಿ ಬಂಗಲೆಯನ್ನು ಹೊಂದಿದ್ದು, ಇದನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಂಗಲೆಯನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ಅವರ ಪ್ರಸಿದ್ಧ ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸ ಸಂಸ್ಥೆಯು ವಿನ್ಯಾಸಗೊಳಿಸಿದೆ. ಇದು ಹೊರಾಂಗಣ ಪೂಲ್, ಟೆನಿಸ್ ಕೋರ್ಟ್, ಮೀನು ಕೊಳ ಮತ್ತು ಉದ್ಯಾನ ಜಾಗದಂತಹ ಸೌಲಭ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.