ಇರಾನ್ ಹಾಗೂ ಇಸ್ರೇಲ್ ನಡುವಿನ ದಾಳಿ ಮುಂದುವರೆದಿದೆ. ದಾಳಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಒಬ್ಬರ ಹಿಂದೊಬ್ಬರಂತೆ ಹೆಜ್ಬೊಲ್ಲಾ ನಾಯಕರು ಕೊನೆಯುಸಿರೆಳೆಯುತ್ತಿದ್ದಾರೆ. ಇದೀಗ ಹೆಜ್ಬೊಲ್ಲಾ ನಾಯಕ ನೆಮ್ ಖಾಸಿಮ್ ತನಗೆ ಒಲಿದು ಬಂದ ಸಂಘಟನೆಯ ಸರ್ವೋಚ್ಛ ನಾಯಕನ ಸ್ಥಾನ ತೊರೆದಿದ್ದು ಮಾತ್ರವಲ್ಲದೇ ತನಗೆ ಹೆಜ್ಬೊಲ್ಲಾ ಸಂಘಟನೆಯ ಸಹವಾಸವೇ ಬೇಡ ಎಂದಿದ್ದಾರೆ.
ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ. ಈ ಹಿಂದೆ ಹೆಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು.
ಇದೀಗ ಹೆಜ್ಬೊಲ್ಲಾದ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾಹ್ ನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿವೆ.
ಅತ್ತ ಹೆಜ್ಬೊಲ್ಲಾ ನಾಯಕರ ನಾಪತ್ತೆ ಬೆನ್ನಲ್ಲೇ ಘಟನೆಯಿಂದ ಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿರುವ ಹೆಜ್ಬೊಲ್ಲಾದ ಮತ್ತೋರ್ವ ಹಿರಿಯ ನಾಯಕ ನೆಮ್ ಖಾಸಿಮ್ ತಾನು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನ ವಹಿಸಿಕೊಳ್ಳುವುದಿಲ್ಲ.. ಅಲ್ಲದೆ ತಾನು ಸಂಘಟನೆಯಲ್ಲೇ ಇರುವುದಿಲ್ಲ ಎಂದು ಹೇಳಿ ತನ್ನ ಹಾಲಿ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾನೆ.
1991ರಿಂದಲೂ ಹಿಬ್ಜುಲ್ಲಾ ಸಂಘಟನೆಯಲ್ಲಿ ನೆಮ್ ಖಾಸಿಮ್ ಗುರುತಿಸಿಕೊಂಡಿದ್ದು, ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಂಘಟನೆಯ ಸರ್ವೋಚ್ಛ ನಾಯಕರು ಹತರಾಗಿ ಕೆಲ ನಾಯಕರು ನಾಪತ್ತೆಯಾಗುತ್ತಿದ್ದಂತೆಯೇ ಈತನ ಹೆಸರು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ತನಗೆ ಯಾವ ಸ್ಥಾನವೂ ಬೇಡ ಎಂದು ಹೇಳಿರುವ ಖಾಸಿಮ್ ತಾನು ಸಂಘಟನೆಯನ್ನೇ ತೊರೆಯುತ್ತಿರುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾನೆ.
ಇನ್ನು ಇಸ್ರೇಲ್ ವಾಯುದಾಳಿಗೆ ಹೆಜ್ಬೊಲ್ಲಾ ನಾಯಕರು ಯಾವ ಮಟ್ಟಿಗೆ ಬೆಚ್ಚಿ ಬಿದ್ದಿದ್ದಾರೆ ಎಂದರೆ, ವಿಡಿಯೋ ಬಿಡುಗಡೆ ಮಾಡಿರುವ ನೇಮ್ ಖಾಸಿಮ್ ವಿಡಿಯೋ ಮಾಡುತ್ತಲೇ ಭಯದಿಂದ ಬೆವರೊರೆಸಿಕೊಳ್ಳುತ್ತಿದ್ದಾನೆ. ಯಾವಕ್ಷಣದಲ್ಲಿ ಎಲ್ಲಿ ಬಾಂಬ್ ಸ್ಫೋಟವಾಗುತ್ತದೋ ಎಂದು ಖಾಸಿಮ್ ಪ್ರಾಣಭೀತಿಯಿಂದಲೇ ವಿಡಿಯೋದಲ್ಲಿ ಮಾತನಾಡುತ್ತಿರುವು ಕಂಡುಬಂದಿದೆ.
ಇನ್ನು ಒಂದೆಡೆ ನೇಮ್ ಖಾಸಿಮ್ ಸಂಘಟನೆ ತೊರೆಯುತ್ತಲೇ ಆತನ ವಿರುದ್ಧ ಕೆಂಡಕಾರಿರುವ ಹಿಬ್ಜುಲ್ಲಾ ಸಂಘಟನೆ ಆತನನ್ನು ಇಸ್ರೇಲಿ ಸ್ಪೈ ಎಂದಿದೆ. ಸಂಘಟನೆಯಲ್ಲಿದ್ದುಕೊಂಡೇ ಇಸ್ರೇಲಿ ಸೇನೆಪರ ಕೆಲಸ ಮಾಡಿದ್ದಾರೆ. ಸಂಘಟನೆ ತೊರೆಯುವ ಮೂಲಕ ತಾವೊಬ್ಬ ಇಸ್ರೇಲಿ ಗೂಢಚಾರಿ ಎಂದು ಸಾಬೀತು ಪಡಿಸಿದ್ದಾರೆ ಹೆಜ್ಬೊಲ್ಲಾ ಆರೋಪಿಸಿದೆ.