ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಜೂನ್ 11 ರಂದು ದರ್ಶನ್, ಪವಿತ್ರಾ ಮತ್ತು ಇತರೆ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇನ್ನೂ ನಟ ದರ್ಶನ್ಗೆ ತೀವ್ರ ಬೆನ್ನು ನೋವು ಕಾಡ್ತಿದೆ. ಬೆನ್ನು ನೋವಿನ ಬಳಲಿಕೆಯಿಂದ ಬೆಂಡಾಗಿರುವ ಆರೋಪಿ ದರ್ಶನ್ರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ದಸರಾ ಮುಗಿಯೋದ್ರಲ್ಲಿ ಜಾಮೀನು ಆಗತ್ತದೆ, ತಾಯಿ ಚಾಮುಂಡಿಶ್ವೇರಿ ತಾಯಿಯ ಆಶೀರ್ವಾದ ಇದೆ. ಜೈಲು ಆಧಿಕಾರಿಗಳು, ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪತಿಗೆ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.
ಇನ್ನೂ ಮಗನ ವಿಚಾರ ಪ್ರಸ್ತಾಪಿಸಿದ ದರ್ಶನ್ಗೆ ನಿಮ್ಮ ಬೆನ್ನು ನೋವಿನ ಸಮಸ್ಯೆ ಬಗ್ಗೆ ಪುತ್ರ ಪದೇ ಪದೇ ಕೇಳ್ತಿದ್ದಾನೆ. ನಾನು ಬರುತ್ತೀನಿ ಅಂತ ಹಠ ಮಾಡ್ತಿದ್ದ, ಆದರೆ ಬಿಸಿಲು ಜಾಸ್ತಿ ಇದೆ ಬೇಡ ಅಂತಾ ಹೇಳಿದೆ. ವಕೀಲರು ಜಾಮೀನು ವಿಚಾರವಾಗಿ ಪಾಸಿಟಿವ್ ಆಗಿದ್ದಾರೆ. ಆದಷ್ಟು ಬೇಗ ಜಾಮೀನು ಸಿಗುತ್ತೆ ಧೈರ್ಯವಾಗಿರಿ ಎಂದು ಹೇಳಿದ್ದಾರೆ ಪತ್ನಿ ವಿಜಯಲಕ್ಷ್ಮಿ.
ಜೈ ಡಿಬಾಸ್ ಎಂದ ಅಭಿಮಾನಿಗಳು, ಮುಗುಳ್ನಕ್ಕ ದರ್ಶನ್
ಪತ್ನಿ ಭೇಟಿಗೆ ಸೆಲ್ನಿಂದ ದರ್ಶನ್ ಹೊರಬಂದಾಗ ಜೈಲು ಹೊರಭಾಗದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳು ಜೈ ಡಿಬಾಸ್ ಎಂದು ಕೂಗಿದ್ರು. ಅಭಿಮಾನಿಗಳು ಜೈ ಡಿಬಾಸ್ ಎಂದು ಕೂಗ್ತಿದ್ದಂತೆ ಅಭಿಮಾನಿಗಳ ಕಡೆ ನೋಡಿದ ಆರೋಪಿ ದರ್ಶನ್ ಮುಗುಳ್ನಕ್ಕು ಸಂದರ್ಶಕರ ಕೋಣೆಗೆ ಹೋದರು.