ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ತಮ್ಮ ನಟನೆಯ ಹಾಗೂ ಡ್ಯಾನ್ಸ್ ಮೂಲಕವೇ ಸಖತ್ ಖ್ಯಾತಿ ಘಳಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡ ಮಿಥುನ್ ಚಕ್ರವರ್ತಿ ಇದೀಗ ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ನಟ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಂಭದಲ್ಲಿ ತಮ್ಮ ಮೈಬಣ್ಣದಿಂದ ಟೀಕೆಗೆ ಗುರಿಯಾಗಿದ್ದು ಅದರಿಂದ ಹೊರ ಬರಲು ಮಾಡಿದ್ದೇನು ಎಂಬುದನ್ನು ಹೇಳಿದ್ದಾರೆ.
”ಮೊದಲ ರಾಷ್ಟ್ರಪ್ರಶಸ್ತಿ ಗೆದ್ದ ಮೇಲೆ ನಾನು ‘Al Pachino’ ಆಗಿಬಿಟ್ಟೆ ಎಂದು ಯೋಚಿಸತೊಡಗಿದೆ. ಹಾಗಾಗಿ, ಯಾವುದೇ ನಿರ್ಮಾಪಕರ ಕಚೇರಿಗೆ ಹೋದರೂ ಅವರಂತೆಯೇ ವರ್ತಿಸತೊಡಗಿದ್ದೆ. ಈ ಹಿನ್ನೆಲೆಯಲ್ಲಿ ಮೂರನೇ ನಿರ್ಮಾಪಕ ನನ್ನನ್ನು ಆಫೀಸಿನಿಂದ ಹೊರಹಾಕಿದರು. ನಾನು ತಪ್ಪು ಮಾಡಿದೆನೆಂಬುದು ನನಗೆ ಅರ್ಥವಾಯಿತು. ಯಾರೂ ನನ್ನೊಂದಿಗೆ ಕೆಲಸ ಮಾಡಲು ಬಯಸಲಿಲ್ಲ. ನನ್ನ ಮೈಬಣ್ಣದ ಬಗ್ಗೆ ಜನ ಗೇಲಿ ಮಾಡುತ್ತಿದ್ದರು. ಹಾಗಾಗಿ, ನನ್ನ ಮೈಬಣ್ಣವನ್ನು ಜನರು ಮರೆಯುವಂತೆ ಮಾಡಲು ನಾನೇನು ಮಾಡಬಹುದೆಂದು ಯೋಚಿಸಲು ಪ್ರಾರಂಭಿಸಿದೆ. ಜನರು ನನ್ನ ಕಾಲುಗಳತ್ತ ಮಾತ್ರ ನೋಡುವಂತೆ ಮಾಡಲು ಡ್ಯಾನ್ಸ್ ಮಾಡಬಹುದೆಂದು ಅರ್ಥ ಮಾಡಿಕೊಂಡೆ. ನಾನು ಅದನ್ನೇ ಮಾಡಿದೆ. ಆಗ ಜನರು ನನ್ನ ಮೈಬಣ್ಣವನ್ನು ಮರೆತರು. ಆನಂತರ ನಾನು ಸೆಕ್ಸಿ, ಡಸ್ಕಿ ಬೆಂಗಾಲಿ ಬಾಬು ಆದೆ” ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಮಿಥುನ್ ಚಕ್ರವರ್ತಿ ಹೇಳಿದರು.
74ರ ಹರೆಯದ ನಟ 1976ರಲ್ಲಿ ಮೃಗಯಾ ಸಿನಿಮಾದ ಮೂಲಕ ಸಿನಿಪಯಣ ಆರಂಭಿಸಿದರು. ಚೊಚ್ಚಲ ಚಿತ್ರದಲ್ಲೇ ಅಮೋಘ ಅಭಿನಯದಿಂದ ಗಮನ ಸೆಳೆದ ನಟ, ಉತ್ತಮ ನಟ ಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್, ಕಸಂ ಪೈದಾ ಕರ್ನೆ ವಾಲೆ ಕಿ, ಕಮ್ಯಾಂಡೋ, ಓ ಮೈ ಗಾಡ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಿಂದಿ ಮಾತ್ರವಲ್ಲದೇ ಬೆಂಗಾಳಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದ 19 ಸಿನಿಮಾಗಳು 1989ರಲ್ಲಿ ಒಂದೇ ವರ್ಷದ ತೆರೆಕಂಡಿದ್ದವು.
ಕೃತಕ ಬುದ್ದಿಮತ್ತೆ ಅಭಿವೃದ್ಧಿಯಲ್ಲಿ ಮಹತ್ತರ ಕೆಲಸಕ್ಕಾಗಿ ಅಮೆರಿಕದ ಜಾನ್ ಜೆ. ಹಾಪ್ ಫೀಲ್ಡ್ ಮತ್ತು ಕೆನಡಾದ ಜೆಫ್ರಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿದೆ.