‘ಬಿಗ್ ಬಾಸ್’ ಮನೆಯಲ್ಲಿ ಅದರದ್ದೇ ಆದ ಕೆಲವೊಂದು ನಿಯಮಗಳಿದ್ದು ಅವುಗಳನ್ನು ಬಿಗ್ ಮನೆಯ ಪ್ರತಿಯೊಬ್ಬರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಒಂದೊಮ್ಮೆ ನಿಯಮ ಮುರಿದರೆ ಅದರ ಫಲಿತಾಂಶವನ್ನು ಪ್ರತಿಯೊಬ್ಬರು ಅನುಭವಿಸಬೇಕಾಗಿ ಬರುತ್ತದೆ.ಕೆಲವೊಮ್ಮೆ ಸ್ಪರ್ಧಿಗಳು ಗೊತ್ತಿಲ್ಲದೆ ತಪ್ಪು ಮಾಡಿದರೆ ಮತ್ತೆ ಕೆಲವೊಮ್ಮೆ ಗೊತ್ತಿದ್ದು ಗೊತ್ತಿದ್ದು ತಪ್ಪುಗಳನ್ನು ಮಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಇತಿಹಾಸದಲ್ಲಿ ನಡೆಯದೇ ಇರುವ ಘನಘೋರ ತಪ್ಪೊಂದು ನಡೆದು ಹೋಗಿದೆ. ಇದಕ್ಕೆ ಮನೆಯ ಪ್ರತಿಯೊಬ್ಬರ ಸಮಸ್ಯರಿಗೂ ಶಿಕ್ಷೆ ಆಗಿದೆ.
ಆರಂಭದಲ್ಲಿ ಬಿಗ್ ಬಾಸ್ ನಾಮಿನೇಷನ್ಗೆ ಚಟುವಟಿಕೆ ಒಂದನ್ನು ನೀಡಿತ್ತು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆದರು. ಉಳಿದ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಾನಸಾ ಸೇರಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಮನೆ ಶಿಕ್ಷೆಗೆ ಒಳಗಾಗಿದೆ. ಮನೆಯ ಅಷ್ಟೂ ಸದಸ್ಯರನ್ನು ನಾಮಿನೇಟ್ ಮಾಡಿ ಬಿಗ್ ಬಾಸ್ ಆದೇಶ ಹೊರಡಿಸಿದ್ದ್ಆರೆ.
ನಿಯಮಗಳ ಪ್ರಕಾರ ‘ಬಿಗ್ ಬಾಸ್’ನಲ್ಲಿ ಬ್ಲೈಂಡ್ಸ್ ಇಳಿಸಿದಾಗ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ. ಇದಕ್ಕೆ ಕಾರಣ ಅಲ್ಲಿ ಟಾಸ್ಕ್ಗೆ ಸಿದ್ಧತೆ ಮಾಡುತ್ತಿರುತ್ತಾರೆ. ಟಾಸ್ಕ್ ಹೇಗಿರುತ್ತದೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಮಾನಸಿಕವಾಗಿ ರೆಡಿ ಆಗುತ್ತಾರೆ. ಈ ಕಾರಣದಿಂದ ಇದಕ್ಕೆ ಅನುಮತಿ ಇಲ್ಲ. ಆದರೆ, ಮಾನಸಾ ಸೇರಿದಂತೆ ಕೆಲವರು ಬ್ಲೈಂಡ್ಸ್ನ ಸರಿಸಿ ಹೊರಗೆ ಇಣುಕಿ ನೋಡಿದ್ದಾರೆ.
ಇದರಿಂದ ಬಿಗ್ ಬಾಸ್ ಸಿಟ್ಟಾದರು. ‘ಬ್ಲೈಂಡ್ಸ್ ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡುವಂತಿಲ್ಲ ಎಂಬುದು ಮನೆಯ ತುಂಬಾ ಮುಖ್ಯವಾದ ಮೂಲ ನಿಯಮ. ಈಗಷ್ಟೇ ಆ ನಿಯಮವನ್ನು ಕೆಲ ಸದಸ್ಯರು ಉಲ್ಲಂಘಿಸಿದ್ದಾರೆ. ಈ ವಿಚಾರ ಮನೆಯ ಕ್ಯಾಪ್ಟನ್ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಶೋಚನೀಯ. ನಿಮ್ಮೆಲ್ಲರ ವರ್ತನೆಯಿಂದ ಬಿಗ್ ಬಾಸ್ಗೆ ನೋವಾಗಿದೆ. ಬಿಗ್ ಬಾಸ್ನ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗೌರವಿಸದ ನಿಮಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರನ್ನು ನಾಮಿನೇಟ್ ಮಾಡಲಾಗುತ್ತಿದೆ ಎಂದು ಆದೇಶ ನೀಡಿದರು.
‘ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಕೂಡ ನಾಮಿನೇಟ್ ಆಗಿರಲಿಲ್ಲ. ಆದರೆ, ಹಂಸ ಅವರೇ ನಿಮ್ಮ ಇಮ್ಯೂನಿಟಿಯನ್ನು ಹಿಂಪಡೆದು ನೇರವಾಗಿ ನಾಮಿನೇಟ್ ಮಾಡಿದ್ದೇವೆ. ಇದು ಇತಿಹಾಸ. ಅಭಿನಂದನೆಗಳು’ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇದರಿಂದ ಮನೆಯಲ್ಲಿ ಅಸಮಾಧಾನದ ಬುಗಿಲೆದಿದೆ.