ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ತಂತ್ರಜ್ಞ ಗ್ರೇಡ್ I ಮತ್ತು ಗ್ರೇಡ್ III ಹುದ್ದೆಗಳಿಗೆ 14,298 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಭಾರತೀಯ ರೈಲ್ವೆ ಇಲಾಖೆಯ ಅಧೀನದಲ್ಲಿರುವ ನೇಮಕಾತಿ ಮಂಡಳಿಯು ದೇಶಾದ್ಯಂತ ಸಾವಿರಾರು ಟೆಕ್ನೀಷಿಯನ್ನಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಹುದು. ಈ ನೇಮಕಾತಿ ನಡೆಯಲಿದ್ದು ಒಟ್ಟು 14,298 ಹುದ್ದೆಗಳು ಖಾಲಿ ಇವೆ. ಈ ಹಿಂದೆಯೂ ಈ ನೇಮಕಾತಿಗಾಗಿ 9 ಮಾರ್ಚ್, 2024 ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 2 ಅಕ್ಟೋಬರ್, 2024 ದಿನಾಂಕದಿಂದ ಪುನಃ ಅವಕಾಶ ನಿಡಲಾಗಿದೆ. 16 ಅಕ್ಟೋಬರ್, 2024 ಕೊನೆಯ ದಿನಾಂಕವಾಗಿದೆ.
ಅಧಿಸೂಚನೆ ಹೆಚ್ಚಿನ ಮಾಹಿತಿಯು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ rrbapply.gov.inನಲ್ಲಿ ಲಭ್ಯವಿದೆ. RRB ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ತಂತ್ರಜ್ಞ ಗ್ರೇಡ್ I ಮತ್ತು ಗ್ರೇಡ್ III ಹುದ್ದೆಗಳಿಗೆ 14,298 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ.
ಶೈಕ್ಷಣಿಕ ಅರ್ಹತೆ: ತಂತ್ರಜ್ಞ ಗ್ರೇಡ್ I ಸಿಗ್ನಲ್: ಸಂಬಂಧಿತ ಕ್ಷೇತ್ರದಲ್ಲಿ B.Sc/B.Tech/Diploma ತಂತ್ರಜ್ಞ ಗ್ರೇಡ್ III: ಸಂಬಂಧಿತ ಕ್ಷೇತ್ರದಲ್ಲಿ 10ನೇ ತೇರ್ಗಡೆ + ITI ಅಥವಾ PCM ಜೊತೆಗೆ 12ನೇ RRB ತಂತ್ರಜ್ಞ ಪರೀಕ್ಷೆಯ ಮಾದರಿ 2024 RRB ತಂತ್ರಜ್ಞ CBT ಪರೀಕ್ಷೆಯ ಮಾದರಿಯು ಗ್ರೇಡ್ I ಮತ್ತು ಗ್ರೇಡ್ III ಹುದ್ದೆಗಳಿಗೆ ವಿಭಿನ್ನವಾಗಿ ಬದಲಾಗುತ್ತದೆ
RRB ತಂತ್ರಜ್ಞರ ಅಧಿಸೂಚನೆ 2024 ಗಾಗಿ ನೇರ ಡೌನ್ಲೋಡ್ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ.
RRB ತಂತ್ರಜ್ಞರ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ವಯಸ್ಸಿನ ಮಿತಿ:
ಟೆಕ್ನಿಷಿಯನ್ ಗ್ರೇಡ್ III ಗೆ 18-33 ವರ್ಷಗಳು ಟೆಕ್ನಿಷಿಯನ್ ಗ್ರೇಡ್ I ಗೆ 18-36 ವರ್ಷಗಳು (01.07.2024 ರಂತೆ)