ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ ಚೌಡಯ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸಿನಿಮಾದ ಶೂಟಿಂಗ್ ಸ್ಪಾಟ್ಗೆ ತೆರಳಿದ ತುಮಕೂರು ಆರ್ಟಿಓ ಅಧಿಕಾರಿಗಳು ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ. ಸಿನಿಮಾ ಆರ್ಟಿಸ್ಟ್ಗಳನ್ನು ಕರೆತಂದಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಚೌಡಯ್ಯಚಿತ್ರತಂಡವು ಆರ್ಟಿಓ ನಿಯಮ ಉಲ್ಲಂಘಿಸಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನ (ಖಾಸಗಿ ವಾಹನ) ಬಳಕೆ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಚಿತ್ರತಂಡದ ಶೂಟಿಂಗ್ ಸ್ಥಳಕ್ಕೆ ತೆರಳಿ ವಾಹನ ವಶಕ್ಕೆ ಪಡೆದಿದ್ದಾರೆ. ಸಿನಿಮಾದ ಶೂಟಿಂಗ್ಗೆ ಕಲಾವಿದರನ್ನು ಕರೆದುಕೊಂಡು ಬರಲು ಹಾಗೂ ಮನೆಗೆ ವಾಪಸ್ ಬಿಡಲು (ನಟ, ನಟಿಯರು, ಸಿಬ್ಬಂದಿ ಪಿಕ್ ಅಪ್, ಡ್ರಾಪ್) ಅನುಕೂಲ ಆಗುವಂತೆ ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಲೋ ಬೋರ್ಡ್ ವಾಹನಗಳನ್ನು ಬಳಸಬೇಕು. ಆದರೆ, ಚಿತ್ರತಂಡವು ಯಲ್ಲೋ ಬೋರ್ಡ್ ವಾಹನಗಳ ಬದಲಿಗೆ ವೈಟ್ ಬೋರ್ಡ್ ಕಾರು ಬಳಕೆ ಮಾಡಲಾಗಿದೆ ಎಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ಸ್ಥಳಕ್ಕೆ ತೆರಳಿದ ತುಮಕೂರು ಆರ್ಟಿಓ ಅಧಿಕಾರಿಗಳಿಂದ ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ.
ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೆಷನ್ ನೀಡಿದ್ದ ದೂರನ್ನ ಆಧರಿಸಿ, ಆರ್ ಟಿಓ ಇನ್ಸ್ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ ಆರ್ಟಿಒ ಅಧಿಕಾರಿಗಳು ತುಮಕೂರಿನ ಕೈದಾಳದ ಶೂಟಿಂಗ್ ಸ್ಪಾಟ್ ಬಳಿಯಿಂದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಇನ್ನೋವಾ ಕಾರು ನಟಿ ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೆಎ 04 ಎಂಎಸ್ 7938 ಸಂಖ್ಯೆಯ ಇನ್ನೋವಾ ಕಾರನ್ನು ಆರ್ಟಿಒ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ರಾಜರಾಜೇಶ್ವರಿ ನಗರದಿಂದ ಬಂದಿದ್ದ ಇನ್ನೋವಾ ಕಾರು, ಮಂಜೇಶ್ ಎಂಬುವವರಿಗೆ ಸೇರಿದ್ದಾಗಿದೆ. ಈ ಕಾರಿನಲ್ಲಿ ಚಲನಚಿತ್ರ ವಾಹನ ಚಾಲಕರ ಸಂಘದ ಬಿಲ್ ಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಇನ್ನೋವಾ ಕಾರಿನಲ್ಲಿ ಚಿತ್ರ ಕಲಾವಿದರು ಓಡಾಡುತ್ತಿದ್ದರು. ಇದಕ್ಕೆ ಬಿಲ್ ಕೂಡ ಪಾವತಿ ಮಾಡಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಆರ್ಟಿಒ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ.