ಹುಬ್ಬಳ್ಳಿ: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಕಾಣಿಸಿದ್ದು ನವಲಗುಂದ ತಾಲ್ಲೂಕಿನ ಗುಡಿಸಾಗರದಲ್ಲಿ ಊಟದಲ್ಲಿ ಹಲ್ಲಿ, ,60 ವಿದ್ಯಾರ್ಥಿಗಳು ಅಸ್ವಸ್ಥಆಗಿರುವ ಘಟನೆ ನಡೆದಿದೆ. ಘಟನೆಗೆ ಗ್ರಾಮಸ್ಥರು ಬಿಸಿ ಊಟ ಸರಬರಾಜು ಮಾಡುವವರ ಮೇಲೆ ಕಿಡಿ ಕಾರಿದರು.
ಐದನೇ ತರಗತಿಯ ಪರೀಕ್ಷೆ ಇರುವ ಕಾರಣ 60 ವಿದ್ಯಾರ್ಥಿಗಳು ಹಾಜರಿದ್ದು, ಹಲ್ಲಿ ಬಿದ್ದಿದ್ದನ್ನು ಕಂಡ ಕೂಡಲೇ ಮುಖ್ಯ ಶಿಕ್ಷಕ ಎಂ.ಏಚ್.ಸಾಯಗೊಳ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಅದೃಷ್ಟವಾತ್ ಯಾವುದೇ ಮಕ್ಕಳು ಅಸ್ವಸ್ಥರಾಗಿಲ್ಲ ಪ್ರತಿ ಮಕ್ಕಳಿಗೂ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ಆಸ್ಪತ್ರೆ ವೈದ್ಯೆ ಡಾ.ವಿದ್ಯಾ .ವಾಯ್.ಎಂ ಹೇಳಿದರು.