ಚಾಮರಾಜನಗರ: ಪಿಜಿಪಾಳ್ಯ ಸಮೀಪ ಅರಣ್ಯಕ್ಕೆ ಆಕ್ರಮವಾಗಿ ಪ್ರವೇಶ ಮಾಡಿ 16 ಕೇಜಿ ಗಂಧದ ಮರಗಳನ್ನು ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಸೆರೆವಾಸ, 50 ಸಾವಿರ ದಂಡ ವಿಧಿಸಿದೆ.
ವಾ.ಓ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಅಪರ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಅರಣ್ಯ ಸಿಬ್ಬಂದಿಗಳಾದ ರಸುಲ್ ವಾಲಿಕರ್ ಮತ್ತು ಸಿಬ್ಬಂದಿ ಪಿಜಿಪಾಳ್ಯ ವಲಯದ ವ್ಯಾಪ್ತಿಯ ಲೊಕ್ಕನಹಳ್ಳಿ ಕಳ್ಳಬೇಟೆ ಶಿಬಿರದಿಂದ ಲೊಕ್ಕನಹಳ್ಳಿ ಸೋಲಾರ್ ಗೇಟ್ ಕಡೆ ಹೋಗುವ ರಸ್ತೆ ಮಧ್ಯದಲ್ಲಿ 2020ರ ಸೆ.16 ರಂದು ತೆರಳುತ್ತಿದ್ದಾಗ ನಾಲ್ವರು ಆರೋಪಿಗಳು 16 ಕೇಜಿ ಹಸಿ ಗಂಧದ ಮರದ ತುಂಡುಗಳು ಹಾಗೂ ಚಿಹ್ನೆಗಳನ್ನು ಒಂದು ಬ್ಯಾಗಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿದ್ದರು.
ಈ ಸಂಬಂಧ ಅಂದಿನ ಎಸಿಎಫ್ ವನಿತಾ ಅವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪ್ರಕರಣವಾಗಿತ್ತು. ಈ ಸಂಬಂಧ ಮೊದಲ ಆರೋಪಿ ಮಾದೇವ ಅಲಿಯಾಸ್ ಕೊಣ್ಣುರ, ಮೂರನೇ ಆರೋಪಿ ರಂಗನಿಗೆ ಐದು ವರ್ಷ ಸರೆವಾಸ, ಐವತ್ತು ಸಾವಿರ ತಂಡ ವಿಧಿಸಿ ಆದೇಶಿಸಲಾಗಿದೆ. ಇನ್ನೂ ಪ್ರಕರಣದ ಎರಡನೇ ಆರೋಪಿ ಕುಂಬೇಗೌಡ ವಿಚಾರಣೆ ಸಮಯದಲ್ಲಿ ಮೃತಪಟ್ಟಿರುವುದರಿಂದ ಹಾಗೂ ನಾಲ್ಕನೇ ಆರೋಪಿ ಅಬ್ದುಲ್ ಜಮೀರ್ ಅನ್ನು ಅರಣ್ಯ ಕಾಯ್ದೆ ಕಾಲಂ 87 ರಡಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಇಬ್ಬರಿಗೆ ಶಿಕ್ಷೆ ವಿಧಿಸಲಾಗಿದೆ.