ಮೈಸೂರು: ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಟುಕೊಂಡು ಈಗ ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಅಂತ ಕಾಂಗ್ರೆಸ್ನವರೇ ಹೇಳ್ತಿದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಆಯುಧಪೂಜೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವಿ ದರ್ಶನ ಪಡೆದು ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಜಾತಿಗಣತಿ ಆಗಲಿಲ್ಲ ಎಂದು ಆರೋಪ ಮಾಡಿದ್ರು.
ನಾನು 14 ತಿಂಗಳು ಸಿಎಂ ಆಗಿದ್ದೆ, ಅವರು ಬಂದು 15 ತಿಂಗಳಾಗಿದೆ.
ಯಾಕೆ ಬಿಡುಗಡೆ ಮಾಡಿಲ್ಲ? ಪ್ರತಿನಿತ್ಯ ಕುರಿಕಾಯೋನು, ಅದಕ್ಕೆ ಹೊಟ್ಟೆ ಉರಿ ಅಂತ ಹೇಳಿಕೊಂಡು ತಿರುಗುತ್ತಾರೆ. ಮೋದಿ ಟೀ ಮಾರಿಲ್ವಾ? ನಾವು ಅಸೂಯೆ ಪಟ್ರೆ ಆಗುತ್ತಾ? ಜನ ತೀರ್ಮಾನ ಮಾಡ್ಬೇಕು? ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಈಗ ಇಟ್ಕೊಂಡು ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಎಂದು ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಎಂದು ಹರಿಹಾಯ್ದರುಹೆಚ್ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ವಿಚಾರವಾಗಿ ಮಾತನಾಡಿ, ನಾನು ಎಷ್ಟು ದಾಖಲೆ ಕೊಡಲಿ. ಈಗ ಕೊಟ್ಟಿರುವುದೇ ಅರಗಿಸಿಕೊಳ್ಳೋಕಾಗ್ತಿಲ್ಲ.
ಕಾಂಗ್ರೆಸ್ ಮುಖಂಡರೇ ಇದರ ಬಗ್ಗೆ ಮಾತಾಡುತ್ತಾರೆ. ಪೆನ್ಡ್ರೈವ್ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇದ್ದಿದ್ದು. ಅದರಲ್ಲಿ ಅಶ್ಲೀಲ ಚಿತ್ರ ಇರಲಿಲ್ಲ. ನಾನು ಕಮಿಷನ್ ಹೊಡಿಬೇಕು ಅಂತಿದ್ರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ತಾಯಿ ಸನ್ನಿಧಾನದಲ್ಲಿ ಹೇಳ್ತಿದೇನೆ ಎಂದು ಸ್ಪಷ್ಟಪಡಿಸಿದರು.