ಹುಬ್ಬಳ್ಳಿ:- ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಗುಂಡೇಟು ಹಾರಿಸಿದ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಸುದೀಪ್ ಮತ್ತು ಕಿರಣ್ ಸೇರಿ ಶಿವು ಚಂದ್ರಶೇಖರ ಕಮ್ಮಾರ ಎಂಬಾತನನ್ನು ಚಾಕು ಇರಿದು ಹತ್ಯೆಗೈದಿದ್ದರು.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇಬ್ಬರು ಸೇರಿ ಉಳಿದ ಆರೋಪಿಗಳನ್ನು ತೋರಿಸುವುದಾಗಿ ಕರೆದೊಯ್ದು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡೇಟು ನೀಡಿದ್ದಾರೆ.
ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ ಈ ಘಟನೆ ನಡೆದಿದೆ