ಮೈಸೂರು: ಇಂದು ನಾಡಿನಾದ್ಯಂತ ವಿಜಯದಶಮಿ ಆಚರಣೆ ಈ ದಿನ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗುತ್ತಾನೆ. ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳು ಬಣ್ಣ ಬಣ್ಣ ಚಿತ್ತಾರಗಳಿಂದ ಶೃಂಗಾರಗೊಂಡಿವೆ.
ಸಂಜೆ 4 ರಿಂದ 4:30ರ ಒಳಗಾಗಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಜಂಬೂಸವಾರಿಯಲ್ಲಿ ಭಾಗವಹಿಸುವ 9 ಆನೆಗಳಿಗೆ ಬಣ್ಣಗಳಿಂದ ಶೃಂಗರಿಸಲಾಗಿದೆ.
ಕ್ಯಾಪ್ಟನ್ ಅಭಿಮನ್ಯುವಿಗೆ ಒಂಬತ್ತು ಆನೆಗಳು ಸಾತ್ ನೀಡಲಿವೆ. ನಿಶಾನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಹೋಗುತ್ತಿರುವುದನ್ನು ನೋಡುವುದೇ ಚಂದ. ಜಂಬೂಸವಾರಿ ಕಲವೇ ಗಂಟೆಗಳಲ್ಲಿ ಆರಂಭವಾಗಲಿದೆ.
ಮೈಸೂರು ದಸರಾಕ್ಕೆ ಆಗಮಿಸಿರುವ 14 ಆನೆಗಳ ಮೇಲೆ ಬಣ್ಣಗಳಿಂದ ಚಿತ್ರ ಬಿಡಿಸಲಾಗಿದೆ. ಆನೆಗಳ ಸೊಂಡಿಲಿಗೆ ಅರಮನೆ ಲಾಂಛನವಾದ ಗಂಡಭೇರುಂಡ ಬಿಡಸಲಾಗಿದೆ. ಕಿವಿಗಳಿಗೆ ಶಂಖಚಕ್ರ ಬಿಡಿಸಲಾಗಿದೆ. ಕಾಲು ಮತ್ತು ಬಾಲಕ್ಕೆ ಹೂವು ಮತ್ತು ಬಳ್ಳಿಗಳನ್ನು ಬಿಡಿಸಲಾಗಿದೆ.
ಕಲಾವಿದ ನಾಗಲಿಂಗಪ್ಪ ಬಡಿಗೇರ ಅವರ ನೇತೃತ್ವದ 10 ಜನರ ಆನೆಗಳಿಗೆ ಚಿತ್ರ ಬಿಡಿಸಿದೆ. ಈಗಾಗಲೆ ಎಲ್ಲ ಆನೆಗಳಿಗೆ ಚಿತ್ರ ಬಿಡಿಸಲಾಗಿದೆ. ಜಂಬೂಸವಾರಿಗೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಬಣ್ಣಗಳಿಂದ ಶೃಂಗಾರಗೊಂಡ ಆನೆಗಳನ್ನು ಕಂಡು ಜನರು ಪುಳುಕಿತರಾಗಿದ್ದಾರೆ.