ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗಿ ಎರಡು ವಾರಗಳಾಗಿದೆ. ಈಗಾಗಲೇ ಓರ್ವ ಸ್ಪರ್ಧಿ ಮನೆಯಿಂದ ಹೊರ ಹೋಗಿದ್ದು ಇಂದು ಯಾರು ಮನೆಯಿಂದ ಔಟ್ ಆಗ್ತಾರೆ ಎಂಬ ಕುತೂಹಲ ಶುರುವಾಗಿದೆ. ಈ ಮಧ್ಯೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ತಪ್ಪು ಮಾಡಿದವರಿಗೆ ಸರಿಯಾಗಿಯೇ ಬೆಂಡ್ ಎತ್ತುತ್ತಾರೆ.ಅಂತೆಯೇ ಇದೀಗ ಗೋಲ್ಡ್ ಸುರೇಶ್ ಹಾಗೂ ಜಗದೀಶ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ದೊಡ್ಮನೆಯಲ್ಲಿ ಎರಡನೇ ವಾರ ನಿಯಮ ಮುರಿದು ನರಕವಾಸಿಗಳು ಬ್ಲೈಂಡ್ಸ್ ಹಿಂದೆ ಹೋಗಿದ್ದರು. ಪರಿಣಾಮ, ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿ ‘ಬಿಗ್ ಬಾಸ್’ ಶಿಕ್ಷೆ ವಿಧಿಸಿದ್ದರು. ಆನಂತರ ತಮಗೆ ಅಧಿಕಾರ ಸಿಕ್ಕಾಗ.. ಬ್ಲೈಂಡ್ಸ್ ಹಿಂದೆ ಮೊದಲು ಹೋಗಿದ್ದು ಅನುಷಾ ರೈ ಎಂದು ಭಾವಿಸಿ ಗೌತಮಿ ಜಾಧವ್ ನೇರವಾಗಿ ನಾಮಿನೇಟ್ ಮಾಡಿದ್ದರು. ಆದರೆ, ಟಾಸ್ಕ್ ಏನು ಅಂತ ನೋಡಿ ತಿಳಿದುಕೊಳ್ಳುವಂತೆ ಮಾನಸಾರನ್ನ ಬ್ಲೈಂಡ್ಸ್ ಹಿಂದೆ ಕಳುಹಿಸಿದ್ದು ಗೋಲ್ಡ್ ಸುರೇಶ್. ಹೀಗಾಗಿ, ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಪ್ರಾಮಾಣಿಕತೆ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಗೋಲ್ಡ್ ಸುರೇಶ್ಗೆ ಬೆಂಡೆತ್ತಿದರು.
‘‘ನಾನಾಗಿದ್ದರೆ ಗೋಲ್ಡ್ ಸುರೇಶ್ ಅವರನ್ನ ನೇರವಾಗಿ ನಾಮಿನೇಟ್ ಮಾಡ್ತಿದ್ದೆ’’ ಎಂದು ಪಂಚಾಯತಿ ಸೆಷನ್ನಲ್ಲಿ ಕಿಚ್ಚ ಸುದೀಪ್ ಗುಡುಗಿದರು. ‘’ಗೊತ್ತಿದ್ದೂ ಮಾಡೋಕೆ ‘ಮಿಸ್ಟೇಕ್’ ಅನ್ನಲ್ಲ, ‘ಚಾಲೆಂಜಿಂಗ್’ ಅಂತಾರೆ! ನಮ್ಮ ಪ್ರೀತಿಗೆ ಭಾಗಿಯಾಗಿ ಚಾಲೆಂಜ್ ಮಾಡಬೇಡಿ’’ ಎಂದು ಗೋಲ್ಡ್ ಸುರೇಶ್ ಹಾಗೂ ಜಗದೀಶ್ ಅವರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
‘’ನಿಮಗೆ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಲಭಿಸಿತ್ತು. ಅನುಷಾರನ್ನ ನೀವು ನಾಮಿನೇಟ್ ಮಾಡಿದ್ರಿ. ಯಾವ ಕಾರಣಕ್ಕೆ?’’ ಎಂದು ಸುದೀಪ್ ಪ್ರಶ್ನಿಸಿದಾಗ, ‘’ಬ್ಲೈಂಡ್ಸ್ ನಿಯಮ ಮುರಿದರು ಎಂಬ ಕಾರಣ ಕೊಟ್ಟಿದ್ದೆ’’ ಎಂದು ಗೌತಮಿ ಜಾಧವ್ ಉತ್ತರಿಸಿದರು. ‘’ಬರೀ ಅನುಷಾ ಮಾತ್ರನಾ ನಿಯಮ ಮುರಿದಿದ್ದು?’’ ಎಂದು ಸುದೀಪ್ ಕೇಳಿದಕ್ಕೆ, ‘’ಇಲ್ಲ. 5 ಜನ ನಿಯಮ ಮುರಿದಿದ್ದರು. ಆದರೆ, ಅನುಷಾ ಮೊದಲು ಅಂತ..’’ ಎಂದು ಗೌತಮಿ ಹೇಳುವಷ್ಟರಲ್ಲಿ ‘’ನಾನು ನಾಮಿನೇಟ್ ಮಾಡುವ ಹಾಗಿದ್ದರೆ ಸುರೇಶ್ ಅವರನ್ನ ಮಾಡ್ತಿದ್ದೆ’’ ಎಂದರು ಕಿಚ್ಚ ಸುದೀಪ್.
‘’ತಪ್ಪಾಗಿದೆ. ಆದರೆ, ತಪ್ಪು ಎಲ್ಲಿಂದ ಶುರುವಾಯ್ತು ಅಂತ ಇಟ್ಟುಕೊಂಡು ಮಾಡಿದೆ’’ ಎಂದು ಗೌತಮಿ ಹೇಳಿದಾಗ, ‘’ಎಲ್ಲಿಂದ ಶುರುವಾಯ್ತು ಅಂತ ಯಾರನ್ನ ಕೇಳಿದ್ರಿ?’’ ಅಂತ ಸುದೀಪ್ ಕೇಳಿದರು. ‘’ಅವರ ತಂಡದವರನ್ನೇ ಕೇಳಿದೆ’’ ಎಂದು ಗೌತಮಿ ಹೇಳಿದಾಗ, ‘’ಅವರಿಗೆ ಯಾರು ಬೇಡ್ವೋ ಅವರನ್ನ ನಿಮಗೆ ಹಾಕ್ಕೊಡಬಹುದು ಅಲ್ವಾ?’’ ಎಂದು ಸುದೀಪ್ ಕೇಳಿದರು.
‘’ಮಾನಸಾ ಅವರನ್ನ ಹೊರಗೆ ಹೋಗಿ ನೋಡು’’ ಹಾಕ್ಕೊಟ್ಟಿದ್ದೇ ಸುರೇಶ್. ಮಾನಸಾ ಹೋಗಿ ಬಂದರು. ನೀವು ಹೋಗಿ ಸುರೇಶ್ ಅವರನ್ನೇ ಕೇಳಿದ್ರಿ. ಅವರು ಕಣ್ಣಲ್ಲೇ ತೋರಿಸಿದರು. ನೀವು ಹೋಗಿ ಬಿದ್ರಿ’’ ಎಂದು ಸುದೀಪ್ ವಿವರಿಸಿದಾಗ, ‘’ಅನುಷಾ ಡಿಫೆಂಡ್ ಮಾಡಿಕೊಳ್ಳಲಿಲ್ಲ’’ ಅಂತ ಗೌತಮಿ ಹೇಳಿದಾಗ, ‘’ಯಾಕಂದ್ರೆ, ಅನುಷಾ ನಿಮ್ಮ ಮೇಲೆ ಹಾಗೂ ‘ಬಿಗ್ ಬಾಸ್’ ಮೇಲೆ ಗೌರವ ಇಟ್ಟಿದ್ದರು. ಆ ಟೈಮ್ನಲ್ಲಿ ಅನುಷಾ ಅವರು ಮಾತಾಡೋಕೆ ಹೋದರು. ಆದರೆ, ‘ಬಿಗ್ ಬಾಸ್’ ಮತ್ತು ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕೊಟ್ಟು ಸುಮ್ಮನಾದರು’’ ಎಂದರು ಸುದೀಪ್.