ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನರಕ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಅವರು ವಿಪರೀತ ಬೆನ್ನು ನೋವಿನಿಂದ ನರಳುತ್ತಿದ್ದಾರೆ.
ಒಂದು ಕಡೆದ ದರ್ಶನ್ ಹೊರ ಬರುವುದನ್ನೇ ಅವರ ಅಭಿಮಾನಿಗಳು ಕಾಯ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಪರ ಲಾಯರ್ ದಾಸನನ್ನು ಹೇಗಾದರು ಮಾಡಿ ಹೊರತರಲೇ ಬೇಕು ಎಂದುಕೊಳ್ತಿದ್ದಾರೆ.
ಬಳ್ಳಾರಿ ಜೈಲಲ್ಲಿರೋ ದರ್ಶನ್ಗೆ ಒಂದೊಂದು ಕ್ಷಣವೂ ನರಕ ದರ್ಶನವಾಗ್ತಿದೆ. ಹೊರಗಿದ್ದ ವೇಳೆ ರಾಜನಂತೆ ಸಾಫ್ಟ್ ಹಾಸಿಗೆಯಲ್ಲಿ ಮಲಗುತ್ತಿದ್ದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಚಾಪೆ ಮೇಲೆ ಮಲಗುವಂತಾಗಿದೆ. ಜೊತೆಗೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ತಪಾಸಣೆ ನಡೆಸಿದ್ದ ವೈದ್ಯರು, ಸ್ಕ್ಯಾನಿಂಗ್ ಮಾಡಲೇ ಬೇಕು ಅಂತಾ ವರದಿ ನೀಡಿದ್ದಾರಂತೆ.
ಪರಪ್ಪನ ಅಗ್ರಹಾರ ಜೈಲಲ್ಲಿದ್ದಾಗ ರಾಜನಂತಿದ್ದ ದರ್ಶನ್ ಅಲ್ಲಿನ ಸೌಕರ್ಯದಿಂದಾಗಿ ಫುಲ್ ಆರಾಮಾಗಿದ್ದರು. ಆದರೆ ರಾಜಾತಿಥ್ಯ ಎಫೆಕ್ಟ್ನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿ ನರಕ ಅನುಭವಿಸುತ್ತಿದ್ದಾರೆ. ಕೂರೋದಕ್ಕೂ ಆಗದೆ, ನೆಮ್ಮದಿಯಾಗಿ ನಿದ್ರೆ ಮಾಡೋಕೆ ಆಗಾದೆ ಪರದಾಡುತ್ತಿದ್ದಾರೆ.
ಹೀಗಾಗಿಯೇ ಬಳ್ಳಾರಿ ಜೈಲಿಗೆ ಬಂದಿದ್ದ ನರರೋಗ ತಜ್ಞ ಡಾ.ವಿಶ್ವನಾಥ್, ದರ್ಶನ್ ಆರೋಗ್ಯ ತಪಾಸಣೆ ಮಾಡಿದ್ದರು. ಈ ವೇಳೆ ದರ್ಶನ್ಗೆ ಚಿಕಿತ್ಸೆಯ ಅವಶ್ಯಕತೆ ಇದೆ ಅನ್ನೋದನ್ನ ಜೈಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ದರ್ಶನ್ ಚೆಕ್ ಮಾಡಿ ಹೋದ ನರರೋಗ ತಜ್ಞರು, ಜೈಲಾಧಿಕಾರಿಗಳಿಗೆ ರಿಪೋರ್ಟ್ ಸಲ್ಲಿಸಿದ್ದಾರೆ. MRI-ಸಿಟಿ ಸ್ಕ್ಯಾನ್ ಮಾಡಲೇ ಬೇಕು ಅಂತಾ ಸೂಚನೆ ನೀಡಿದ್ದಾರಂತೆ.
ವೈದ್ಯರು ನೀಡಿರೋ ವರದಿ ಪ್ರಕಾರ ದರ್ಶನ್ಗೆ ತುರ್ತಾಗಿ MRI ಹಾಗೂ ಸಿಟಿ ಸ್ಕ್ಯಾನ್ ಮಾಡಿಸಬೇಕಿದೆ. ಈ ಎರಡು ಸ್ಕ್ಯಾನಿಂಗ್ ಆದ ನಂತರ ಸರ್ಜರಿ ಮಾಡಬೇಕಾ ಬೇಡ್ವಾ ಅನ್ನೋದನ್ನ ವೈದ್ಯರು ನಿರ್ಧಾರ ಮಾಡಲಿದ್ದಾರೆ. ಇದರ ಜೊತೆಗೆ ಫಿಜಿಯೋಥೆರಪಿಯ ಅವಶ್ಯಕತೆಯೂ ಇದೆಯಂತೆ. ಹಾಗೆಯೇ ನರಗಳ ಪರೀಕ್ಷೆಗೂ ವೈದ್ಯರು ಸೂಚನೆ ನೀಡಿದ್ದು, ನಿತ್ಯವೂ ಚಾಪೆ ಮೇಲೆ ಮಲಗೋದ್ರಿಂದಾಗಿ ಬೆನ್ನು ನೋವು ಜಾಸ್ತಿ ಆಗಿದ್ಯಂತೆ. ಹೀಗಾಗಿ ಮಲಗಲು ಕಾಟ್ ಅಥವಾ ಕೂರಲು ಚೇರ್ ನೀಡುವಂತೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ದರ್ಶನ್ಗೆ ಎಮ್ಆರ್ಐ ಸ್ಕ್ಯಾನ್ ಮಾಡಿಸೋದಕ್ಕೆ ಕಳೆದೊಂದು ವಾರದಿಂದಲೂ ವೈದ್ಯರು ಸೂಚನೆ ನೀಡ್ತಿದ್ದಾರೆ. ಆದರೆ ದರ್ಶನ್ ಮಾತ್ರ ಇದ್ಯಾವುದಕ್ಕೂ ಒಪ್ತಿಲ್ಲ. ಜಾಮೀನು ಸಿಕ್ಮೇಲೆ ಬೆಂಗಳೂರಲ್ಲೇ ಟ್ರೀಟ್ಮೆಂಟ್ ತಗೊಳ್ತೀನಿ ಅಂತಾ ಮಾತ್ರೆಗಳನ್ನ ಮಾತ್ರ ಸೇವಿಸ್ತಿದ್ದಾರಂತೆ. ಇದೀಗ ವೈದ್ಯರೇ ದರ್ಶನ್ ರ ಆರೋಗ್ಯದ ಕುರಿತು ಜೈಲಾಧಿಕಾರಿಗಳಿಗೆ ವರದಿ ನೀಡಿರೋದ್ರಿಂದ, ದರ್ಶನ್ ವಕೀಲರು ಇದನ್ನ ಕೋರ್ಟ್ ಗಮನಕ್ಕೆ ತರುವ ಸಾಧ್ಯತೆ ಇದೆ.