ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಹಾಗೂ ಬಾಲಿವುಡ್ ನಟಿ ಶ್ರುತಿ ಹಾಸನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಹಂಚಿಕೊಂಡಿದ್ದು ಆ ಫೋಟೋ ಸಖತ್ ವೈರಲ್ ಆಗಿದೆ. ಪ್ರತಿ ಭಾರಿಯೂ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿದ್ದ ಶೃತಿ ಹಾಸನ್ ಈ ಭಾರಿ ಬೆಡ್ ರೂಮ್ ನಲ್ಲಿ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಶ್ರುತಿ ಹಾಸನ್ ಹಾಗೂ ಶಾಂತನು ರಿಲೇಷನ್ ಶಿಪ್ ನಲ್ಲಿ ಇದ್ದಾರೆ. ಅಲ್ಲದೇ. ಪೋಷಕರ ಒಪ್ಪಿಗೆ ಮೇರೆಗೆ ಇಬ್ಬರು ಮುಂಬೈನಲ್ಲಿ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ಶಾಂತನು ಜೊತೆಗಿನ ಫೋಟೋಗಳನ್ನು ಶೃತಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಬೆಡ್ ರೂಮ್ ನಲ್ಲಿರುವ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದಾರೆ.
ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶಾಂತನು ಮೇಲಿನ ಪ್ರೀತಿಯನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.