ಕಾಲಿವುಡ್ ನಟ ಜಯಂ ರವಿ ಹಾಗೂ ಆರತಿ ಡಿವೋರ್ಸ್ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ರವಿ ಅವರಿಗೆ ಗಾಯಕಿಯೊಂದಿಗೆ ಸಂಬಂಧ ಇರುವ ಕಾರಣಕ್ಕೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
ಪ್ರೀತಿಸಿ ಮದುವೆಯಾಗಿದ್ದ ಜಯಂ ರವಿ ಹಾಗೂ ಆರತಿ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಆದ್ರೆ ಮದುವೆಯಾದ 15ವರ್ಷಗಳ ಬಳಿಕ ಜೋಡಿ ಬೇರೆ ಬೇರೆಯಾಗೋ ನಿರ್ಧಾರ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.
ಜಯಂ ರವಿ ಅವರು ಇನ್ಸ್ಟಾಗ್ರಾಮ್ ಮೂಲಕ ಪತ್ನಿ ಆರತಿ ಅವರೊಂದಿಗಿನ ವೈವಾಹಿಕ ಜೀವನ ಕೊನೆಗೊಳಿಸುತ್ತಿರುವುದಾಗಿ ಅನೌನ್ಸ್ ಮಾಡಿದರು. ಅಷ್ಟೇ ಅಲ್ಲದೆ ಈ ಪೋಸ್ಟ್ ತಕ್ಷಣ ವೈರಲ್ ಆಗಿ ಆರತಿ ರವಿ ಅವರು ಈ ಬೆಳವಣಿಗೆ ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದು ಇನ್ನೂ ಚರ್ಚೆಗೆ ಕಾರಣವಾಗಿತ್ತು.
ಆರತಿ ರವಿ ಹಾಗೂ ಜಯಂ ರವಿ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅವರ ಪ್ರೀತಿಗೆ ಹಾಗೂ ಮದುವೆಗೆ ಮನೆಯವರಿಂದ ಅಂತಹ ಬೆಂಬಲವೇನೂ ಸಿಕ್ಕಿರಲಿಲ್ಲ. ಆದರೂ ಇವರು ಎಲ್ಲರ ಮನ ಒಲಿಸಿ ಪ್ರೀತಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ ಸದ್ಯ ಅವರಿಬ್ಬರೂ ಬೇರ್ಪಡುತ್ತಿರುವ ಸುದ್ದಿ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮತ್ತೊಂದು ಮೂಲಗಳ ಪ್ರಕಾರ ಜಯಂ ರವಿ ಹಾಗೂ ಆರತಿ ಒಡಕಿಗೆ ಆರತಿ ಅವರ ತಾಯಿಯೇ ಕಾರಣ ಎನ್ನಲಾಗುತ್ತಿದೆ. ಆರತಿ ಅವರ ತಾಯಿ ಪ್ರೊಡ್ಯೂಸ್ ಮಾಡುತ್ತಿದ್ದ ಪ್ರಾಜೆಕ್ಟ್ನಲ್ಲಿ ಜಯಂ ರವಿ ನಟಿಸುವಾಗ ನಟನಿಗೆ ಮಾರ್ಕೆಟ್ ವ್ಯಾಲ್ಯೂ ಕಡಿಮೆ ಇದೆ ಎಂದು ಸಂಭಾವನೆ ಕಡಿತಗೊಳಿಸಿದ್ದು ಸೊಸೆ-ಅಳಿಯನ ಮಧ್ಯೆ ಜಗಳ ತಂದಿದೆ. ನಂತರ ಇದೇ ಮನಸ್ತಾನ ದಂಪತಿ ಮಧ್ಯೆಯೂ ಬಿರುಕು ಮೂಡಿಸಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಇತ್ತೀಚೆಗೆ ಜಯಂ ರವಿ ಅವರ ಪೋಸ್ಟ್ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ ನಟ ಜಯಂ ರವಿ ಅವರು ಶೇರ್ ಮಾಡಿದ ಒಂದು ಪೋಸ್ಟ್ ಈ ಜೋಡಿ ಮತ್ತೆ ಒಂದಾಗುತ್ತಾರೆ ಎನ್ನುವ ಒಂದು ಹಿಂಟ್ ನೀಡಿದ್ದಾರೆ.
ಇತ್ತೀಚೆಗೆ ಜಯಂ ರವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಸ್ ಶೇರ್ ಮಾಡಿದ್ದರು. ತಮ್ಮ ರೀಸೆಂಟ್ ಫೋಟೋ ಶೂಟ್ ಭಾಗವಾಗಿ ಕ್ಲಿಕ್ ಮಾಡಿದ ಒಂದಷ್ಟು ಫೋಟೋಗಳನ್ನು ನಟ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದರು. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯ ವಿಷಯವೊಂದನ್ನು ಗಮನಿಸಿದ್ದಾರೆ.
ನಟ ಜಯಂ ರವಿ ಅವರ ವಿಚ್ಛೇದನೆಯಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ವೈರಲ್ ಆಗಿರುವ ಫೊಟೋದಲ್ಲಿ ಜಯಂ ರವಿ ಅವರ ಬೆರಳಲ್ಲಿ ಉಂಗುರ ಹಾಗೆಯೇ ಇದೆ. ಇದನ್ನು ನೋಡಿದ ನೆಟ್ಟಿಗರು ಡಿವೋರ್ಸ್ ಆದರೂ ಉಂಗುರ ಯಾಕೆ ತೆಗೆದಿದಲ್ಲ. ಅಷ್ಟೊಂದು ಪ್ರೀತಿ ಇದ್ದರೆ ಬೇರ್ಪಟ್ಟಿದ್ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅದ್ಯಾಕೋ ಜಯಂ ರವಿ ಅವರು ಉಂಗುರವನ್ನು ಇನ್ನೂ ಧರಿಸಿಕೊಂಡೇ ಇರುವುದು ಅವರ ಅಭಿಮಾನಿಗಳಿಗೆ ಮತ್ತಷ್ಟು ಅನುಮಾನ ಮೂಡಿಸಿದೆ. ಮೂಡುವಂತೆ. ಜಯಂ ರವಿಯ ಫೋಟೋ ವೈರಲ್ ಆದ ಮೇಲಂತೂ ಒಲ್ಲದ ಮನಸಿನಿಂದಲೇ ಈ ಜೋಡಿ ಬೇರ್ಪಟ್ಟಿದೆ ಎಂದೇ ಹೇಳಲಾಗುತ್ತಿದೆ.