ಇಂದು ಮುಂಜಾನೆ 5.49ರ ಸುಮಾರಿಗೆ ಕಾಬೂಲ್ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ ಅನುಭವವಾಗಿದೆ ಎಂದು ಹೇಳಲಾಗಿದೆ.
ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪವು ಇಂದು ಬೆಳಗ್ಗೆ 5:49 ಕ್ಕೆ ಅಫ್ಘಾನಿಸ್ತಾನದ ಕಾಬೂಲ್ನಿಂದ 85 ಕಿಮೀ ಪೂರ್ವಕ್ಕೆ ಅಪ್ಪಳಿಸಿತು ಎಂದು NCS ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ಸೋಮವಾರ, ಮಾರ್ಚ್ 27 ರಂದು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದ ಫರ್ಖರ್ ಜಿಲ್ಲೆಯ ದಕ್ಷಿಣಕ್ಕೆ 25 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಎರಡು ದಿನಗಳ ಅಂತರದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ.