ಚಿಕ್ಕಬಳ್ಳಾಪುರ:- ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತುಗಳನ್ನಾಡಿದ್ದಾರೆ.ಪಾಪದ ಪಾಷಣ ಕಳೆಯಬೇಕಿದೆ. ತಾನು ಮಾಡಿದ ಕರ್ಮ ಫಲವತ್ತಾದ್ರೆ ಯಾರೇನು ಮಾಡುವರು. ಪಾಪದ ಕೆಲಸ ಮಾಡುವುದಕ್ಕೆ ಹೆದರಬೇಕಿತ್ತು ಎಂದಿದ್ದಾರೆ.
ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ A-2 ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆಗಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಬೆಂಗಳೂರಿನ 57ನೇ CCH ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಹಿನ್ನೆಲೆಯಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ಗೆ ಬಿಗ್ ಶಾಕ್ ಆಗಿದೆ. ಇನ್ನು ಜಾಮೀನಿಗಾಗಿ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.