‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಆಗದೆ ಇಬ್ಬರು ಸ್ಪರ್ಧಿಗಳು ಕೈ ಕೈ ಮಿಲಾಯಿಸಿಕೊಂಡಿದ್ದರು. ಈ ಕಾರಣದಿಂದ ಬಿಗ್ ಬಾಸ್ ಸ್ಪರ್ಧಿ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ.
‘ಬಿಗ್ ಬಾಸ್’ ಮನೆಯಲ್ಲಿ ದಿನದಿಂದ ದಿನಕ್ಕೆ ವಾತಾವರಣ ಹದಗೆಡುತ್ತಿದೆ. ಅಕ್ಟೋಬರ್ 17ರ ಎಪಿಸೋಡ್ನಲ್ಲಿ ಎಲ್ಲರೂ ಜಗದೀಶ್ ವಿರುದ್ಧ ಒಂದಾಗಿದ್ದರು. ಇದರಿಂದ ಸಿಡುಕುತ್ತಿದ್ದ ಜಗದೀಶ್ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಇನ್ನು, ರಂಜಿತ್ ಅವರು ‘ಹೀಗೆ ಮುಂದುವರಿದರೆ ಜಗದೀಶ್ ಅವರ ಎದಮೇಲೆ ಕಾಲಿಟ್ಟು ಹೋಗೋತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು.
ಕೆಲವು ವರದಿಗಳ ಪ್ರಕಾರ ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಫೈಟ್ ಆದರೆ ಅದರ ಭಾಗಿದಾರರನ್ನು ನೇರವಾಗಿ ಹೊರಹಾಕಲಾಗುತ್ತದೆ. ಈ ಮೊದಲು ಹುಚ್ಚ ವೆಂಕಟ್ ಅವರು ಈ ರೀತಿ ಫೈಟ್ ಮಾಡಿಕೊಂಡು ಹೊರ ಹೋಗಿದ್ದರು. ಈಗ ಜಗದೀಶ್ ಹಾಗೂ ರಂಜಿತ್ ಬಡಿದಾಡಿಕೊಂಡು ಹೊರ ಹೋಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ ದೊಡ್ಮನೆಯಿಂದ ಕೇವಲ ಜಗದೀಶ್ ಮಾತ್ರವೇ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ ಎಪಿಸೋಡ್ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.