ಉತ್ತರ ಪ್ರದೇಶ:- ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಜಾರಿ ಬಿದ್ದ ಪುಟ್ಟ ಮಗಳನ್ನು ರಕ್ಷಿಸಲು ಅಪ್ಪನೋರ್ವ ರೈಲು ನಿಲ್ಲಿಸಿ 16 ಕಿಲೋಮೀಟರ್ ಹಿಂದಕ್ಕೆ ಓಡಿಹೋಗಿ ಮಗುವನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿದ್ದೆಗೆ ಜಾರಿದ ಮುದ್ದಿನ ಮಗಳನ್ನು ಮಲಗಿಸೋದಕ್ಕೆ ಅಪ್ಪ ತಡಕಾಡಿದ್ದ. ತುರ್ತು ಕಿಟಕಿ ಪಕ್ಕದಲ್ಲೇ ಮಗಳನ್ನು ಮಲಗಿಸಿ ಜೋಪಾನ ಮಾಡುತ್ತಿದ್ದ. ಮಂಪರುಗಣ್ಣಿನಲ್ಲೇ ಇದ್ದವನಿಗೆ ಶಾಕ್ ಕೊಟ್ಟಿದ್ದು ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು. ಗಾಳಿ ಬರಲಿ ಅಂತ ತುರ್ತು ಕಿಟಕಿಯನ್ನು ಯಾರೋ ತೆಗೆದಿದ್ದಾರೆ. ಕೂಡಲೇ ಪಕ್ಕದಲ್ಲೇ ಮಲಗಿದ್ದ ಕಂದಮ್ಮ ಕಿಟಕಿಯಿಂದ ಜಾರಿ ಕೆಳಕ್ಕೆ ಬಿದ್ದಿದ್ದಾಳೆ
ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣ ಕರುಣಾಜನಕ ಘಟನೆಗೆ ಸಾಕ್ಷಿಯಾಗಿದೆ. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಲಗಿದ್ದ ಮಗಳು ಜಾರಿ ಬಿದ್ದ ಕೂಡಲೇ ಅಕ್ಷರಶಃ ಎದೆ ಝಲ್ ಅಂದಿತ್ತು. ರೈಲಿನ ಚೈನ್ ಹಿಡಿದು ಎಳೆದವರೇ ಬಿಕ್ಕಳಿಸಿ ಅಳೋದಕ್ಕೆ ಶುರು ಮಾಡಿದ್ದ. ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ. ಓಡೋಡಿ ಬಂದ ಪೊಲೀಸರು, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಜೊತೆ ಸೇರಿ ಕಂದಮ್ಮನನ್ನ ರಕ್ಷಿಸೋ ಕಾರ್ಯಕ್ಕೆ ಮುಂದಾದರು.
ಪೊಲೀಸರು ಮೂರು ಟೀಮ್ಗಳಾಗಿ ಕಂದಮ್ಮನನ್ನ ರಕ್ಷಿಸೋ ಕಾರ್ಯಾಚರಣೆ ಆರಂಭಿಸಿದ್ದರು. ಎರಡು ಟೀಮ್ ವಾಹನಗಳಲ್ಲಿ ಹುಡುಕಾಟ ನಡೆಸಿತ್ತು. ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕೋದಕ್ಕೆ ಮುಂದಾಯ್ತು. ಅರವಿಂದ್ ಗಾಡಿ ಹತ್ತದೇ ಮಗಳನ್ನ ಉಳಿಸಿಕೊಳ್ಳಬೇಕು ಅಂತ ಒಂದೇ ಸಮನೇ ಓಡಿದ್ದರು. ಪೊಲೀಸರಿಗಿಂತಲೂ ಮುಂಚೆಯೇ ವಿರಾರಿ ಸ್ಟೇಷನ್ ಬಳಿಗೆ ಧಾವಿಸಿದ್ರು
ಪೊದೆಯೊಂದರಲ್ಲಿ ಗಾಯಗೊಂಡು ಮಗು ಬಿದ್ದಿದ್ದಳು. ಇದನ್ನು ನೋಡಿ ತಂದೆ ಮರುಕ ವ್ಯಕ್ತಪಡಿಸಿದರು.