ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಆರಂಭದಿಂದಲೂ ಟಿಆರ್ ಪಿ ರೇಟ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಆರಂಭದಿಂದಲೂ ಜನರ ಮನಸ್ಸು ಗೆಲ್ಲುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ಮಹಾ ತಿರುವು ಪಡೆದುಕೊಂಡಿದೆ.
ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಎರಡೆರಡು ಸರ್ಪ್ರೈಸ್ ಕೊಡೋಕೆ ಸ್ನೇಹಾ ತಯಾರಾಗಿದ್ದಾಳೆ. ಒಂದು ಕಡೆ ಬಂಗಾರಮ್ಮನನ್ನು ಬಡಿಸಿಕೊಂಡು ಹೋಗಿರುವ ಸ್ನೇಹಾಗೆ ಮತ್ತೊಂದೆಡೆ ಸಹನಾ ಸಿಕ್ಕಿದ್ದಾಳೆ. ಅದೇ ಕಾರಣಕ್ಕೆ ಈ ಧಾರವಾಹಿ ಮುಕ್ತಾಯ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.
ಜೀ ವಾಹಿನಿ ಪ್ರೋಮೋ ಶೇರ್ ಮಾಡಿಕೊಂಡಿದೆ.ಈ ಪ್ರೋಮೋ ನೋಡಿ ವೀಕ್ಷಕರು ಈ ಧಾರಾವಾಹಿ ಅಂತ್ಯ ಕಾಣಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಗಾಸಿಪ್ ಬೆನ್ನಲ್ಲೇ ಸ್ನೇಹಾ ಪಾತ್ರಧಾರಿ ಸಂಜನಾ ಅವರು ಇನ್ಸ್ಟಾದಲ್ಲಿ ಹೊಸ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಕೆಲವೊಂದು ಗುಡ್ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಸಂಜನಾ ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ವೀಕ್ಷಕರು ಸ್ನೇಹಾ ಪಾತ್ರ ಅಂತ್ಯವಾಗಲಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ಕಥೆಯೂ ನೋಡುವಾಗ ಸುಖಾಂತ್ಯ ಕಾಣುವಂತಿದೆ.ಇಷ್ಟೂ ದಿನ ಸಹನಾ ಬದುಕಿಲ್ಲ ಅಂದುಕೊಂಡಿದ್ದ ಸ್ನೇಹಾಗೆ ಅಕ್ಕ ಬದುಕಿರುವ ಸತ್ಯವೂ ಗೊತ್ತಾಗಿದೆ. ಪುಟ್ಟಕ್ಕನ ಬರ್ತ್ಡೇಗೆ ಬಂಗಾರಮ್ಮ ಹಾಗೂ ಸಹನಾ ಸುದ್ದಿಯನ್ನು ಹೇಳುವುದಾಗಿ ನಿರ್ಧಾರ ಮಾಡಿದ್ದಾಳೆ ಸ್ನೇಹ.
ಸಂಜನಾ ಅವರು ಧಾರಾವಾಹಿ ಜತೆಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಈ ಧಾರಾವಾಹಿಯಲ್ಲಿ ಅಭಿನಯಿಸಿರುವ ಅನೇಕ ಕಲಾವಿದರಿಗೆ ಹೊಸ ಆಫರ್ಗಳು ಬರುತ್ತಿವೆ. ಈ ಬಗ್ಗೆ ಉಮಾಶ್ರೀ ಅವರು ಕೆಲವು ದಿನಗಳ ಹಿಂದೆ ಫೇಸ್ಬುಕ್ ಲೈವ್ನಲ್ಲಿ ಹೇಳಿಕೊಂಡಿದ್ದರು, ಇದೇ ಧಾರಾವಾಹಿತ ಕಂಠಿ ಪಾತ್ರಧಾರಿಗೆ ಸಿನಿಮಾ ಆಫರ್ ಬಂದಿತ್ತು ಎಂದು ಹೇಳಿಕೊಂಡಿದ್ದರು.