ಕೊಲೆಸ್ಟ್ರಾಲ್ ಹೆಚ್ಚಾದರೆ ಅದರಿಂದ ಇಲ್ಲದ ಸಮಸ್ಯೆಗಳು ಶುರುವಾಗುತ್ತವೆ. ಮುಖ್ಯವಾಗಿ ಹೃದಯಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳು ಕಾಣಿಸಿ ಕೊಳ್ಳುತ್ತವೆ. ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಇದಕ್ಕೆ ಪುಷ್ಟಿ ಕೊಡುತ್ತವೆ. ಸಕ್ಕರೆ ಕಾಯಿಲೆ ಒಂದು ವೇಳೆ ಮಿತಿ ಮೀರಿದರೆ ತುಂಬಾ ಕಷ್ಟ.
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಔಷಧಿಗಳು ಈಗಾಗಲೇ ಲಭ್ಯವಿದೆ. ವೈದ್ಯರಿಂದ ಕೇಳಿ ಪಡೆದು ತೆಗೆದುಕೊಳ್ಳಬಹುದು. ಆದರೆ ಹೇಳದೆ ಕೇಳದೆ ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದರೆ ಅದಕ್ಕೆ ಇಲ್ಲಿದೆ ಸುಲಭ ಟಿಪ್ಸ್.