ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಇತ್ತೀಚೆಗಷ್ಟೇ ಮದುವೆಯಾದ ಎರಡೇ ವರ್ಷಕ್ಕೆ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ.
ಹನ್ಸಿಕಾ ಎರಡು ವರ್ಷಗಳ ಹಿಂದೆ ಸೋಹೈಲ್ ಖತೂರಿಯಾ ಜೊತೆ ಹಸೆಮಣೆ ಏರಿದ್ದಾರೆ. ನಮ್ಮ ಧೀರ್ಘ ಕಾಲದ ಕನಸು ನನಸಾಗಿದೆ ಎಂದು ಬರೆದುಕೊಂಡಿರುವ ನಟಿ ಗೃಹಪ್ರವೇಶದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹನ್ಸಿಕಾ ಅರ್ಜುನ್ ನಟನೆಯ ದೇಶಮುದುರು ಸಿನಿಮಾದ ಮೂಲಕ ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಓದುತ್ತಿರುವಾಗಲೇ ಸಿನಿಮಾಗಳಿಗೆ ಎಂಟ್ರಿಕೊಟ್ಟ ಹನ್ಸಿಕಾ ಕಡಿಮೆ ಸಮಯದಲ್ಲೇ ಖ್ಯಾತಿ ಘಳಿಸಿದರು.
ಬ್ಯಾಕ್ ಟು ಬ್ಯಾಕ್ ತೆಲುಗು ತಮಿಳು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಮೆಚ್ಚುಗೆ ಗಳಿಸಿದರು. ಜೊತೆಗೆ ಕನ್ನಡದಲ್ಲಿ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಬಿಂದಾಸ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೂ ಚಿರಪರಿಚಿತ ಆಗಿದ್ದಾರೆ.
ತಮಿಳಿನಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದ ಹನ್ಸಿಕಾ ತೂಕ ಹೆಚ್ಚಾದ ಕಾರಣ ಹನ್ಸಿಕಾಗೆ ಸಿನಿಮಾ ಅವಕಾಶಗಳು ಕಡಿಮೆಯಾದವು. ಈ ಮಧ್ಯೆ ನಟ ಸಿಂಬು ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಅವರಿಬ್ಬರು ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದಾಗ ಪ್ರೀತಿಸತೊಡಗಿದರು. ಆದರೆ, ಕೆಲವು ವರ್ಷಗಳ ನಂತರ ಬೇರೆ ಬೇರೆಯಾದರು.
ತನ್ನ ಸಿನಿಮಾ ಜರ್ನಿಗೆ ತನ್ನ ತೂಕವೇ ಮುಳುವಾಗಬಾರದೆಂದು, ತೂಕ ಇಳಿಸಿಕೊಂಡು ಮತ್ತೆ ಸಿನಿಮಾರಂಗಕ್ಕೆ ಮರಳಿದರು. ಆದರೆ, ಹನ್ಸಿಕಾರ ಎರಡನೇ ಇನ್ನಿಂಗ್ಸ್ನಲ್ಲಿ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲಿಲ್ಲ. ಹೀಗಾಗಿ 2022 ರಲ್ಲಿ ತಮ್ಮ ಪ್ರಿಯಕರ ಸೋಹೈಲ್ ಖತೂರಿಯಾರನ್ನು ಮದುವೆಯಾದರು.
ಸೋಹೈಲ್ಗೆ ಇದು ಎರಡನೇ ಮದುವೆ. ಹನ್ಸಿಕಾ ತನ್ನ ಗೆಳತಿಯ ಗಂಡನನ್ನೇ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಸೋಹೈಲ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ನಂತರ ಹನ್ಸಿಕಾಳನ್ನು ಪ್ರೀತಿಸಿ, ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಯಾದರು.
ಮದುವೆಯಾಗಿ ಎರಡು ವರ್ಷಗಳಾಗಿದ್ದು ಇದೀಗ ಗಂಡ ಸೋಹೈಲ್ ಖತೂರಿಯಾ ಜೊತೆ ಸುಂದರ ಬಂಗಲೆ ಕಟ್ಟಿಸಿ, ಗೃಹಪ್ರವೇಶ ಮಾಡಿದ್ದಾರೆ. ಆ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಆರಂಭ ಎಂದು ಹನ್ಸಿಕಾ ಪೋಸ್ಟ್ ಮಾಡಿದ ಫೋಟೋಗಳಿಗೆ ಲೈಕ್ಗಳು, ಶುಭಾಶಯಗಳು ಹರಿದುಬರುತ್ತಿವೆ. ಹನ್ಸಿಕಾ ಗೃಹಪ್ರವೇಶದಲ್ಲಿ ಅವರ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.