ಬೆಂಗಳೂರು:-;ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ದಿನ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ ಮುಡಾದ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಾಲು- ಸಾಲು ಪ್ರಶ್ನೆಗಳಿಗೆ ಮುಡಾದ ಸಿಬ್ಬಂದಿಗಳು ಕಂಗಾಲಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗೆ ಮುಡಾ ಅಧಿಕಾರಿಗಳು ತಬ್ಬಿಬ್ಬಾದರು.
ಶ್ರೀಮತಿ ಪಾರ್ವತಿ ಅವರ ಸೈಟ್ ಮೂಲ ದಾಖಲಾತಿ ಕೊಡಿ. ವೈಟ್ನರ್ ಹಾಕಿದ್ದ ದಾಖಲೆ ಕೊಡಿ. ಮೂಲ ದಾಖಲೆ ಎಲ್ಲಿದೇ? ಎಲ್ಲ ಸರಿಯಾದ ದಾಖಲೆ ಕೊಡಿ. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಡಾ ಅಧಿಕಾರಿಗಳು ನಾವು ಹೊಸಬರು ಸರ್ ಕಳೆದ ತಿಂಗಳಷ್ಟೇ ಹೊಸದಾಗಿ ಮುಡಾಗೆ ಬಂದಿದ್ದೇವೆ. ನಮಗೂ ಇದಕ್ಕೂ ಸಂಬಂಧವಿಲ್ಲ. ದಯಮಾಡಿ ಈ ವಿಚಾರದಲ್ಲಿ ನಮ್ಮನ್ನು ಬಿಡಿ. ಇಲ್ಲಿರುವ ದಾಖಲೆಗಳನ್ನು ಕೊಡ್ತೇವೆ. ನೀವು ಕೇಳಿದ ಕೆಲ ದಾಖಲೆಗಳ ಪೈಕಿ ಇರುವ ದಾಖಲೆಯನ್ನು ಕೊಡ್ತೀವಿ ಎಂದಿದ್ದಾರೆ.
ಈ ಮಧ್ಯೆ ಇಡಿ ಅಧಿಕಾರಿಗಳಿಗೆ 2010ರ ವರೆಗೆ 800 ಪುಟಗಳ ದಾಖಲಾತಿಗಳ ಜೆರಾಕ್ಸ್ ನೀಡಿದರು. ನಮಗೆ ಈ ದಾಖಲಾತಿ ಬೇಡ. ಪಾರ್ವತಿ ಅವರಿಗೆ ಸೈಟು ವರ್ಗಾವಣೆಯಾದ ದಾಖಲೆ ಕೊಡಿ. 50:50 ಅನುಪಾತದ ಅಡಿಯಲ್ಲಿ ಹಂಚಿಕೆಯಾಗಿರುವ ದಾಖಲೆ ಕೊಡಿ. 3 ಬಾರಿ ನೋಟಿಸ್ ಕೊಟ್ಟಿದ್ದವು. 1 ಬಾರಿ ಶೋಕಾಸ್ ನೋಟಿಸ್ ನೀಡಿದ್ದವು. ಯಾವುದಕ್ಕೂ ನಿಮ್ಮಿಂದ ಪ್ರತಿಕ್ರಿಯೆ ಬರಲಿಲ್ಲ ಯಾಕೆ ? ಇಡಿ ಅಧಿಕಾರಿಗಳು ಎಂದ್ರೆ ತಾತ್ಸರವೇ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದರು.
ಇಡಿ ಅಧಿಕಾರಿಗಳು ಸತತ 6 ಗಂಟೆಯಿಂದ ಸುಧೀರ್ಘ 40 ಪ್ರಶ್ನೆ ಕೇಳಿದ್ದು, ಇಡಿ ಅಧಿಕಾರಿಗಳ ಅರ್ಧ ಪ್ರಶ್ನೆಗೆ ಮುಡಾ ಅಧಿಕಾರಿಗಳಿಂದ ಉತ್ತರವೇ ಇಲ್ಲ..! ಉತ್ತರ ನೀಡದ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ತೀವ್ರ ತರಾಟೆ ತೆಗೆದುಕೊಂಡರು
ಮೊದಲೇ ಸಿದ್ಧತೆ ಮಾಡಿಕೊಂಡು ಬಂದಿದ್ದ ಪ್ರಶ್ನೆಗಳು ಈ ಕೆಳಕಂಡಂತಿವೆ.
*ನಿಮ್ಮ ಹೆಸರೇನು?
*ನೀವು ಯಾವ ಹುದ್ದೆಯಲ್ಲಿದ್ದಿರಾ?
*ಎಷ್ಟು ಕಾಲದಿಂದ ಆಯುಕ್ತರಾಗಿದ್ದೀರಿ?
*ಮುಡಾದ ಬಗ್ಗೆ ನಿಮಗೆಷ್ಟು ಗೊತ್ತು?
*ಮುಡ ಹಗರಣ ಪ್ರಕರಣ ಬಗ್ಗೆ ಎಷ್ಟು ಗೊತ್ತು?
*ಮುಡಾ ಹಗರಣ ಪ್ರಕರಣದಲ್ಲಿ ನಿಮ್ಮ ಪಾತ್ರ ಏನು?
*ಸಿಎಂ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಗೊತ್ತಾ?
50:50 ಹಗರಣದ ಬಗ್ಗೆ ನಿಮಗೆ ತಿಳಿದಿದ್ದೇಯಾ?
ಸಿಎಂ ಪತ್ನಿಗೆ 14 ಸೈಟು ಹಂಚಿದ್ದು ಯಾವಾಗ?
ಸೈಟುಗಳ ಸ್ಥಿತಿ ಈಗ ಹೇಗಿದೆ?
ಸೈಟುಗಳ ದಾಖಲೆ ಎಲ್ಲಿದೆ?
A4 ದೇವರಾಜು ಬಗ್ಗೆ ಗೊತ್ತಾ?
A3 ಮಲ್ಲಿಕಾರ್ಜುನ್ ಬಗ್ಗೆ ಗೊತ್ತಾ?
A2 ಪಾರ್ವತಿ ಅವರ ಬಗ್ಗೆ ಗೊತ್ತಾ?
A1 ಸಿಎಂ ಸಿದ್ದರಾಮಯ್ಯ ಪ್ರಭಾವ ಏನಿದೆ?
ಸೈಟು ಹಂಚಿದ ಬಗ್ಗೆ ನಿಮ್ಮ ಬಳಿ ಮಾಹಿತಿ ಏನಿದೆ?
AdLr ಯಿಂದ ಮಾಹಿತಿ ಪಡೆದುಕೊಂಡಿದ್ದೀರಾ?
ಕಂದಾಯ ಇಲಾಖೆಯಿಂದ ದಾಖಲೆ ಸಂಗ್ರಹ ಮಾಡಿದ್ದೀರಾ
*ತಾಲೂಕು ಕಚೇರಿಯಿಂದ ಅಗತ್ಯ ಮಾಹಿತಿ ಪಡೆದಿದ್ದೀರಾ
*ದೂರುದಾರ ಸ್ನೇಹಮಯಿ ಕೃಷ್ಣ ರಿಂದ ಪಡೆದಿರುವ ದಾಖಲೆ ಎಲ್ಲಿ
ಮೂಲ ದಾಖಲೆ ಎಲ್ಲಿ ?
*ಅವರಿಂದ ಪಡೆದುಕೊಂಡ ಮೂಲ ದಾಖಲೆ ಎಲ್ಲಿ
*ಮುಡಾದ ಮೂಲ ದಾಖಲೆ ಎಸ್ತಿದೆ
*ಮುಡಾದ ಹಗರಣ ಎಷ್ಟು ಪುಟದಲ್ಲಿದೆ
*ದಾಖಲೆಗಳನ್ನು ಯಾವಾಗ ಯಾರು ಯಾರಿಗೆ ನೀಡಿದ್ದೀರಾ
*ಕೆಲ ದಾಖಲು ಇಲ್ಲ ಎನ್ನುವ ಮಾಹಿತಿ ಇದೆ ಯಾಕೆ
*ನೀವು ಬಂದ ಬಳಿಕ ತನಿಖೆ ಯಾವ ಹಂತಕ್ಕೆ ಹೋಗಿದೆ
ಸೈಟು ವಾಪಸ್ ಪಡೆದ ಬಳಿಕ ಸೈಟುಗಳ ಸ್ಥಿತಿ ಹೇಗಿದೆ
ದಾಖಲೆಗಳು ಸರ್ಟಿಫೈಡ್
*1997 ರಲ್ಲಿ ನೋಟಿಫಿಕೇಶನ್ ಬಗ್ಗೆ ಗೊತ್ತಾ
*1998 ಡಿ ನೋಟಿಫಿಕೇಶನ್ ಗೊತ್ತಾ
*2004 ದೇವರಾಜು ರಿಂದ ಭೂಮಿ
ಸಿಎಂ ಬಾಮೈದ ಮಲ್ಲಿಕಾರ್ಜುನ್ ಖರೀದಿ
*2005 ವಸತಿ ಭೂ ಪರಿವರ್ತನೆ
*2002 ವಶಕ್ಕೆ ಪಡೆದು ನಿವೇಶನ ಹಂಚಿದ್ದ ಮುಡಾ
*2010 ಪಾರ್ವತಿಗೆ ಅವ್ರಿಗೆ ಜಮೀನು ದಾನ
*2014 ಮುಡಾಗೆ ಮನವಿ ಪತ್ರ ಕೊಟ್ಟಿರುವ ಪಾರ್ವತಿ
*ಬದಲಿ ನಿವೇಶನ ಕೋರಿ ಪಾರ್ವತಿ ಅರ್ಜಿ
*ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಜಿ
*2021 ರಲ್ಲಿ ಬದಲಿ ನಿವೇಶನ ಪಡೆದಿರುವ ಪಾರ್ವತಿ
*ಬದಲಿ ನಿವೇಶನ ಕೊಡುವ ಮುನ್ನವೇ 50:50 ಅನುಪಾತ ರದ್ದು
*ಆದರೂ ಕಾನೂನು ಮೀರಿ ಸೈಟು ಹಂಚಿಕೆ
ಸೈಟ್ ವಾಪಸ್ ಹೇಗೆ ಪಡೆದುಕೊಂಡಿದ್ದೀರಿ?
ಸೈಟ್ ವಾಪಸ್ಸು ಪಡೆದುಕೊಳ್ಳುವ ಪ್ರಕ್ರಿಯೆ ಮುಗಿಸಿದ್ದೀರಾ? ಎಂಬ ಪ್ರಶ್ನೆಗಳನ್ನು ಕೇಳಿದ್ದು ಮತ್ತಷ್ಟು ಪ್ರಶ್ನೆಗಳನ್ನ ಕೇಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.