ಇಂದು ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಉಪಲೋಕಾಯುಕ್ತ ಅನಿರೀಕ್ಷಿತ ಭೇಟಿ ನೀಡಿದ ಬಿ ವೀರಪ್ಪ ಜೈಲಿನ ವ್ಯವಸ್ಥೆಗಳ ಬಗ್ಗೆ ಖೈದಿಗಳ ಬಳಿ ವಿಚಾರಿಸಿದ ರು.
ತುಮಕೂರು ಹೊರವಲಯದ ಊರುಕೆರೆ ಬಳಿಯಿರುವ ಜಿಲ್ಲಾ ಕಾರಾಗೃಹಕ್ಕೆ ದಿಢಿರ್ ಭೇಟಿ ನೀಡಿದ್ದು ಜೈಲಿನ ವ್ಯವಸ್ಥೆಗಳ ಬಗ್ಗೆ ಖೈದಿಗಳ ಬಳಿ ವಿಚಾರಿಸಿದ ಉಪಲೋಕಾಯುಕ್ತ ಬಿ.ವೀರಪ್ಪ
ಜೈಲಿನಲ್ಲಿರುವ ಖೈದಿಗಳ ಕೊಠಡಿ, ಅಡುಗೆ ಕೋಣೆ, ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ ನಡೆಸಿದ್ದು ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಹಿನ್ನೆಲೆ ಜೈಲಧಿಕಾರಿಗಳಿಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಹಾಗೆ ಜೈಲಿನ ಗುಣಮಟ್ಟದ ಬಗ್ಗೆ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದ ಈ ವೇಳೆ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸ,ಲೋಕಾಯುಕ್ತ ಅಧೀಕ್ಷಕ ಎ ವಿ ಲಕ್ಷ್ಮೀ ನಾರಾಯಣ,ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಎಸ್ ಮಾಳಿ,ಎಸ್ಪಿ ಅಶೋಕ್ ಸಾಥ್ ನೀಡಿದರು.