ಬಾಗಲಕೋಟೆ: ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಹೂಸೂರಕ್ಕೆ ಮೊದಲ ಬಾರಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವೆಂಕನಗೌಡ ಪಾಟೀಲ ರವರಿಗೆ ಸರ್ಕಾರ ನೇಮಕ ಮಾಡಿದೆ. ಎಂದು ಕಾಂಗ್ರೆಸ್ ಮುಖಂಡ ಸಿದ್ದು. ಕೊಣ್ಣೂರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೂಸೂರ ನಗರದ ವಗ್ಗ ಮಲ್ಲಯ್ಯ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ನಿಮ್ಮ ಊರಿನ ಏನಾದರೂ ಸಮಸ್ಯೆಗಳು ಇದ್ದರೆ ನನಗೆ ತಿಳಿಸಿ ಸಾಧ್ಯವಾದ ಮಟ್ಟಿಗೆ ಪ್ರಾಮಾಣಿಕ ವಾಗಿ ಮಾಡಿಸುತ್ತೇನೆ ಎಂದರು.
ಇದೆ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ನಗರಸಭೆ ಸ್ಥಾಯಿ ಸಮಿತಿ ಚೇರಮನ ಅರುಣ ಬುದ್ನಿ, ನಗರಸಭೆ ಆಶ್ರಯ ಸಮೀತಿ ಸದಸ್ಯ ಮಲ್ಲಪ್ಪ ಹಿಪ್ಪರಗಿ ರವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಕಾಂಗ್ರೆಸ ಪಕ್ಷದ ಮುಖಂಡರಾದ ಸತ್ಯಪ್ಪ ಮಗದುಮ್, ಕೃಷ್ಣ ನಿಂಗಸಾನಿ, ರಾಮಣ್ಣ ಲೇಂಡಿ, ಪಾಂಡು ಗಾಯಕವಾಡ , ತಾನಾಜಿ ನಿಕಂ, ಮಹಾದೇವ ಯರಗಟ್ಟಿ, ಮಲ್ಲಪ್ಪ ಬಿಸನಾಳ, ಶಂಕರ ಆಲಖನೋರ, ಚಿಕ್ಕಪ್ಪ ಉಂಕಿ, ನಾಗಪ್ಪ ಲೇಂಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು,