ಕಲಘಟಗಿ (ಧಾರವಾಡ) : ಪಟ್ಟಣದ ಮುಖ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಎಪಿಎಂಸಿ, ಬಮ್ಮಿಗಟ್ಟಿ ಕ್ರಾಸ್, ಮೀನು ಮಾರ್ಕೆಟ್, ಮಚ್ಚಿಗೆರ ಓಣಿ, ಯುವ ಶಕ್ತಿ ಸರ್ಕಲ್, ಚೌಡಿ ಕ್ರಾಸ್, ಬಸ್ ನಿಲ್ದಾಣ, ಮುಂತಾದ ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಜನಸಾಮಾನ್ಯರು ನಡೆದಾಡುವುದು ಕಷ್ಟಕರವಾಗಿದೆ.
ಪ್ರತಿನಿತ್ಯ ಕೆಲವೊಂದು ಪ್ರದೇಶಗಳಲ್ಲಿ ಹತ್ತು ರಿಂದ ಹದಿನೈದು ನಾಯಿಗಳ ಗುಂಪು ಪ್ರತಿನಿತ್ಯ ಚಿಕ್ಕ ಮಕ್ಕಳು ಮಾರ್ಕೆಟ್ ಸ್ಥಳದ ದಾರಿಯಲ್ಲಿ ಹೋಗುವಾಗ ಕೈಯಲ್ಲಿರುವ ಪದಾರ್ಥಗಳನ್ನು ತೆಗೆದುಕೊಂಡು ಬರುವಾಗ ಆ ಪದಾರ್ಥಗಳನ್ನು ತಿನ್ನುವ ಆಸೆಗೆ ನಾಯಿಗಳು ಗುಂಪು ಭಯ ಹುಟ್ಟಿಸುತ್ತಿವೆ.
ರಸ್ತೆಗಳಲ್ಲಿ ವಾಹನ ಸವಾರರು ಸಂಚಾರ ಮಾಡುವಾಗ ನಾಯಿಗಳ ಗುಂಪು ಓಡಿ ಹೋಗುವಾಗ ವಾಹನಗಳಿಗೆ ಹಾಗೂ ವಾಹನ ಸವಾರರಿಗೆ ಅಡ್ಡವಾಗಿ ಅಪಘಾತಗಳು ಹೆಚ್ಚಾಗುತ್ತಿವೆ.
ಈ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಮುಂಡಗೋಡ ಹಾಗೂ ಹಳಿಯಾಳ ರಸ್ತೆ ಉದ್ದಕ್ಕೂ ಮಾಂಸ ಆಹಾರ ಪದಾರ್ಥ ತಿನ್ನಲು ನಾಯಿಗಳ ಗುಂಪುಗಳನ್ನು ನೋಡಿದರೆ ಭಯಂಕರವಾಗುತ್ತದೆ. ರಾತ್ರಿ ವೇಳೆ ಬೈಕ್ ಸವಾರರಿಗೆ ದಾರಿಯಲ್ಲಿ ಹೋಗುವರಿಗೆ ಪ್ರತಿನಿತ್ಯ ಸಮಸ್ಯೆ ಉಂಟು ಮಾಡುತ್ತಿವೆ.