ಬೆಂಗಳೂರು:- ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಕನ್ನಡದ ಖ್ಯಾತ ನಿರ್ಮಾಪಕ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಕೆ. ಮಂಜು ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ನಿರ್ಮಾಪಕ ಕೆ ಮಂಜು ಅವರು ಇಂದು ಸಂಜೆ ದಿಢೀರ್ ಆಗಿ ಎದೆ ನೋವು ಕಾಣಿಸಿದೆ. ತಕ್ಷಣ ಕೆ. ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ನಿರ್ಮಾಪಕ ಕೆ.ಮಂಜು ಮಗ ಮಾತನಾಡಿ, ನಿರ್ಮಾಪಕ ಕೆ.ಮಂಜು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಮಂಜು ಆರೋಗ್ಯದಲ್ಲಿ ಕೊಂಚ ಚೇತರಿಕೆ ಆಗಿದ್ದು. ವೈದ್ಯರು ಇಂದು ರಾತ್ರಿ ಇಲ್ಲ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರಂತೆ. ಕೆ.ಮಂಜು ಅರೋಗ್ಯದ ಬಗ್ಗೆ ಮಗ ಶ್ರೇಯಸ್ ಮಂಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಸ್ವತಃ ಮಂಜು ಅವರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಕೆಲಸ ಹೆಚ್ಚಾಗಿ ಒತ್ತಡ ಉಂಟಾಗಿತ್ತು, ಹೀಗಾಗಿ ವೈದ್ಯರ ಸಲಹೆ ಮೇರೆಗೆ ಜನರಲ್ ಬಾಡಿ ಚೆಕಪ್ ಮಾಡಿಸಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಆಪರೇಷನ್ ಆಗಿತ್ತು, ಅದರ ನೋವು ಕಾಣಿಸಿಕೊಂಡಿತ್ತು ಹೀಗಾಗಿ ಇಸಿಜಿ ಇನ್ನಿತರೆ ಪರೀಕ್ಷೆಗಳನ್ನು ಮಾಡಿಸಿದ್ದು, ಯಾವುದೇ ಸಮಸ್ಯೆ ಇಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.