ಹಿಂದಿನ ಸೀಸನ್ ಗಳಿಗೆ ಕಂಪೇರ್ ಮಾಡಿದರೆ ಬಿಗ್ ಬಾಸ್ ಸೀಸನ್ 11 ಹೆಚ್ಚು ಸುದ್ದಿಯಾಗುತ್ತಿದೆ. ಆರಂಭದಿಂದಲೇ ಈ ರಿಯಾಲಿಟಿಶೋ ವಿವಾದದ ಮೂಲಕವೇ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 11 ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರ ಹಾಕಿದ್ದಾರೆ. ಜಗದೀಶ್ ಅವರು ಮಿತಿಮೀರಿದ ವರ್ತನೆಯೆ ಇದಕ್ಕೆ ಕಾರಣವಾಗಿದ್ದು ಜಗದೀಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿರುವುದು ಗೊತ್ತೇ ಇದೆ. ಅವರನ್ನು ಬಿಗ್ ಬಾಸ್ ಅವರೇ ಎಲಿಮಿನೇಟ್ ಮಾಡಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ಮಹಿಳಾ ಸ್ಪರ್ಧಿಗಳ ವಿರುದ್ಧ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಎಲಿಮಿನೇಟ್ ಆಗಿದ್ದು, ಮತ್ತೆ ಬರಬೇಕು ಎನ್ನುವ ಕೂಗು ಇದೆ. ಅವರು ಬರುತ್ತಾರೆ ಎಂದು ಅನೇಕರು ಅಂದುಕೊಂಡಿದ್ದು ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್ 19ರ ಎಪಿಸೋಡ್ನಲ್ಲಿ ಸುದೀಪ್ ಅವರು ಮನೆಯವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಪ್ರಶ್ನೆಗಳು ಮನೆಯವರು ಮಾಡಿದ ತಪ್ಪನ್ನು ಎತ್ತಿ ತೋರಿಸುತ್ತಾ ಇತ್ತು. ಸುದೀಪ್ ಅವರು ಜಗದೀಶ್ನ ವಹಿಸಿಕೊಂಡು ಮಾತನಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಮನೆ ಮಂದಿಗೆ ಕಾಣುತ್ತಾ ಇತ್ತು. ಹೀಗಾಗಿ, ಸುದೀಪ್ ಪ್ರಶ್ನೆ ಕೇಳಿದಾಗ ಅವರು ಜಗದೀಶ್ ಮಾಡಿದ್ದು ತಪ್ಪು ಎಂದು ಹೇಳುವ ರೀತಿಯಲ್ಲಿ ಮಾತನಾಡಲು ಆರಂಭಿಸುತ್ತಿದ್ದರು.
ಈ ವೇಳೆ ಸ್ಪಷ್ಟನೆ ಕೊಡುವಾಗ ಸುದೀಪ್ ಅವರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಜಗದೀಶ್ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ ಎಂದಲ್ಲ ಹೇಳಲು ಇಲ್ಲಿ ನಿಂತಿಲ್ಲ. ಅವರ ಮಾತಿನ ಮೇಲೆ ನಿಗಾ ಇರಲಿಲ್ಲ. ಈ ಕಾರಣದಿಂದ ಅವರು ಎಲಿಮಿನೇಟ್ ಆದರು. ಇದನ್ನು ಬಿಗ್ ಬಾಸ್ ಸಹಿಸಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ’ ಎಂದು ಹೇಳಿದ್ದಾರೆ. ಇದರಿಂದ ಜಗದೀಶ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರೋದಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ.